Publish Date: Fri, 20 May 2022 (21:08 IST)
Updated Date: Fri, 20 May 2022 (21:13 IST)
ಸಿಲಿಂಡರ್ ಸ್ಫೋಟಗೊಂಡು ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿತಗೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.. ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪತಿ ಮೃತಪಟ್ಟಿದ್ದಾರೆ..ಪತಿ ಲಕ್ಷ್ಮಣ ಸಾವನ್ನಪ್ಪಿದ್ದು, ಪತ್ನಿ- ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಅಲುವೇಲಮ್ಮಗೆ ಗಂಭೀರ ಗಾಯಗಳಾಗಿವೆ..ಅಲುವೇಲಮ್ಮಗೆ ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..ರಾತ್ರಿ ಗ್ಯಾಸ್ ಲೀಕ್ ಆಗಿ ಮುಂಜಾನೆ ಒಲೆ ಹಚ್ಚಬೇಕಾದರೆ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ..ಸ್ಥಳಕ್ಕೆ ಚೇಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ