Publish Date: Fri, 20 May 2022 (21:00 IST)
Updated Date: Fri, 20 May 2022 (21:02 IST)
ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ..ವಿದ್ಯಾರಣ್ಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ..ನಗರದಲ್ಲಿ ನಕಲಿ ದಾಖಲೆ ಸೃಸ್ಟಿಸಿ ಖಾಲಿ ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಆಕ್ರಣವಾಗಿ ಹಣ ಮಾಡುತ್ತಿದ್ದರು..ಶೆರ್ಲಿ ಜೋಸ್ ಅಲಿಯಾಸ್ ಫೈಜ್ ಸುಲ್ತಾನ್, ಕಬೀರ್ ಅಲಿಯಾಸ್ ಬಾಬು, ಜಗದೀಶ್ ಅಲಿಯಾಸ್ ಯೋಗೇಶ್, ಜಯಮ್ಮ ಅಲಿಯಾಸ್ ಕಲ್ಪನಾ ಹಾಗೂ ಪೂಜಾ ಅಲಿಯಾಸ್ ವೈಶಾಲಿ ಬಂಧಿತ ಆರೋಪಿಗಳು ಎನ್ನಲಾಗಿದೆ..ಇನ್ನು ಐವರು ಆರೋಪಿಗಳನ್ನ ಬಂಧಿಸಿ ವಿದ್ಯಾರಣ್ಯಪುರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.