ಹೊರ ದೇಶದ ಸಂಸತ್ನಲ್ಲಿ ಮೊದಲ ಬಾರಿಗೆ ಕನ್ನಡ ಕಹಳೆ ಮೊಳಗಿದೆ..ಕೆನಡಾ ಪಾರ್ಲಿಮೆಂಟ್ನಲ್ಲಿ ಸಂಸತ್ ಸದಸ್ಯ ರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ..
ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್ನಲ್ಲಿ ಮಾತನಾಡಿದ್ದಾರೆ..ಇದೇ ಮೊದಲ ಬಾರಿಗೆ ವಿದೇಶಿ ಪಾರ್ಲಿಮೆಂಟ್ನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದರು. ಈ ಮೂಲಕ ಕೆನಡಾದ ಪಾರ್ಲಿಮೆಂಟ್ನಲ್ಲಿ ಕನ್ನಡದ ಕಹಳೆ ಮೊಳಗಿದೆ. ಈ ಸುಂದರ ಭಾಷೆಗೆ ಸುದೀರ್ಘ
ಇತಿಹಾಸ ಇದೆ. ಕನ್ನ ಡ ಭಾಷೆಯನ್ನು 5 ಕೋಟಿ ಜನರು ಮಾತನಾಡುತ್ತಾರೆ ಎಂದು ಅವರು ಹೇಳಿದರು..ಅಲ್ಲದೇ, ತುಮಕೂರು ಜಿಲ್ಲೆ ದ್ವಾರಾಳು ಗ್ರಾಮದ ವ್ಯಕ್ತಿ ಕೆನಡಾ ಸಂಸತ್ ಸದಸ್ಯನಾಗಿ ಕನ್ನಡ ಮಾತನಾಡುವುದು ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ..ಇನ್ನು, ಕುವೆಂಪು ರಚನೆಯ ಮತ್ತು ಡಾ.ರಾಜ್ಕುಮಾರ್ ಹಾಡಿರುವ ಎಲ್ಲಾದರೂಇರು, ಎಂತಾದರೂಇರು, ಎಂದೆಂದಿಗೂನೀ ಕನ್ನಡವಾಗಿರು ಎಂಬ ಹಾಡು ಹಾಡುವ ಮೂಲಕ ಕೆನಡಾ ಸಂಸತ್ನಲ್ಲಿ ಚಂದ್ರ ಆರ್ಯ ತಮ್ಮ ಭಾಷಣ ಮುಗಿಸಿದರು.