Publish Date: Mon, 27 Jan 2020 (16:51 IST)
Updated Date: Mon, 27 Jan 2020 (16:53 IST)
ಜಮೀನಿನಲ್ಲಿ ಮರವೇರಿ ಕುಳಿತ ಕರಡಿಯೊಂದಕ್ಕೆ ಸ್ಥಳೀಯ ಜನರೇ ಅಮಾನುಷ ವರ್ತನೆ ತೋರಿದ್ದಾರೆ.
ಚಿತ್ರದುರ್ಗ ತಾಲೂಕಿನ ಭರಮಸಾಗರದ ಆಜಾದ್ ನಗರ ಬಳಿ ಘಟನೆ ನಡೆದಿದೆ. ದಾದಾಪೀರ್ ಎಂಬುವರ ಜಮೀನಿನಲ್ಲಿನ ಮರವೇರಿ ಕುಳಿತಿತ್ತು ಕರಡಿ.
ಕರಡಿ ಓಡಿಸಲು ಅರಣ್ಯಾಧಿಕಾರಿಗಳ ಹರಸಾಹಸ ಪಟ್ಟರು. ಇದನ್ನೂ ಮುನ್ನ ಕೋಲಿನಿಂದ ತಿವಿದು, ಬೆಂಕಿ ಹಚ್ಚಿ ಅವೈಜ್ಞಾನಿಕ ಕಾರ್ಯಾಚರಣೆ ಮಾಡಿದ ಸ್ಥಳೀಯರ ಕ್ರಮ ಹಲವರ ಆಕ್ರೋಶಕ್ಕೆ ಕಾರಣವಾಯಿತು.
ಮಧ್ಯಾಹ್ನದಿಂದ ತಡರಾತ್ರಿವರೆಗೆ ಅರಣ್ಯಾಧಿಕಾರಿಗಳಿಂದ ಕಾಲಹರಣ ನಡೆಯಿತು. ಕೊನೆಗೆ ತಡರಾತ್ರಿ ಮರದಿಂದ ಇಳಿದು ಕರಡಿ ಹೋಗಿದೆ.