ಶ್ರೀರಂಗಪಟ್ಟಣ ದಸರಾ 2021: ಆನೆಯ ನಡವಳಿಕೆ ನೋಡಿ ಬೆಚ್ಚಿದ ಜನ ಸ್ಥಳದಿಂದ ಓಡಿದ್ದಾರೆ. ಮೆರವಣಿಗೆ ವೇಳೆ ಭಾರೀ ಶಬ್ದ ಮಾಡಿದ ಹಿನ್ನಲೆ ಆನೆ ಬೆದರಿದ ಎಂದು ಹೇಳಲಾಗಿದೆ. ಆ ಬಳಿಕ, ಮೆರವಣಿಗೆಯ ಬದಲು ವೇದಿಕೆಯ ಹಿಂಭಾಗಕ್ಕೆ ಆನೆಯನ್ನು ಕರೆದುಕೊಂಡು ಹೋಗಲಾಗಿದೆ.
ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ ಚಾಲನೆ ನೀಡಿದ್ದಾರೆ. ಸ್ಚಾಮೀಜಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ ಸಾಥ್ ನೀಡಿದ್ದಾರೆ. ಆದರೆ, ಶ್ರೀರಂಗಪಟ್ಟಣ ದಸರಾಗೆ ಚಾಲನೆ ಹಾಗೂ ಪುಷ್ಪಾರ್ಚನೆ ವೇಳೆ ಗೋಪಾಲಸ್ವಾಮಿ ಹೆಸರಿನ ಆನೆ ಬೆದರಿದೆ. ಈ ಕಾರಣದಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಂಬೂಸವಾರಿಯನ್ನು ರದ್ದುಗೊಳಿಸಲಾಗಿದೆ.
ಆನೆ ಬೆದರಿದ ಹಿನ್ನೆಲೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗಿದೆ. ತಾಯಿ ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆಯನ್ನು ಬೆಳ್ಳಿ ರಥದಲ್ಲಿ ಮುಂದುವರಿಸಲಾಗಿದೆ. ಜಂಬೂ ಸವಾರಿ ವೇಳೆ ಬೆದರಿದ ಗೋಪಾಲಸ್ವಾಮಿ ಆನೆ, ಬೆದರಿ ಒಂದು ಸುತ್ತು ಸುತ್ತಿದೆ. ಆನೆಯ ನಡವಳಿಕೆ ನೋಡಿ ಬೆಚ್ಚಿದ ಜನ ಸ್ಥಳದಿಂದ ಓಡಿದ್ದಾರೆ. ಮೆರವಣಿಗೆ ವೇಳೆ ಭಾರೀ ಶಬ್ದ ಮಾಡಿದ ಹಿನ್ನಲೆ ಆನೆ ಬೆದರಿದ ಎಂದು ಹೇಳಲಾಗಿದೆ. ಆ ಬಳಿಕ, ಮೆರವಣಿಗೆಯ ಬದಲು ವೇದಿಕೆಯ ಹಿಂಭಾಗಕ್ಕೆ ಆನೆಯನ್ನು ಕರೆದುಕೊಂಡು ಹೋಗಲಾಗಿದೆ.
ಆನೆ ವೈದ್ಯ ರಮೇಶ್, ಪಶು ವೈದ್ಯ ಸಹಾಯಕ ಅಕ್ರಂ, ಮಾವುತರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದು ಹೇಳಲಾಗುತ್ತಿದೆ. ಪೊಲೀಸ್ ವೈಫಲ್ಯಕ್ಕೆ ಮೊಟಕುಗೊಂಡ ಜಂಬೂ ಸವಾರಿ ಎನ್ನಲಾಗುತ್ತಿದೆ. ಆದರೆ, ಜನರ ಗಾಬರಿ ನಡುವೆಯೂ ಸಿಬ್ಬಂದಿ, ಮಾವುತ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಜಂಬೂಸವಾರಿಯಲ್ಲಿ ಬೆದರಿದ್ದ ಆನೆ ನಿಯಂತ್ರಸಿದ ಹಿನ್ನೆಲೆ ಆನೆ ನಿಯಂತ್ರಿಸಿದ ಮಾವುತನಿಗೆ 3 ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ. ಸಚಿವರು, ಶಾಸಕರು ಬಹುಮಾನ ನೀಡಿ ಗೌರವಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮೆರವಣಿಗೆ ವೇಳೆ ಜನರ ಗಲಾಟೆಯಿಂದಾಗಿ ಗೋಪಾಲಸ್ವಾಮಿ ಆನೆ ಬೆದರಿತ್ತು. ಕೂಡಲೇ ಎಚ್ಚೆತ್ತ ಮಾವುತ ಆನೆಯನ್ನು ನಿಯಂತ್ರಿಸಿದ್ದರು.
ಜಂಬೂಸವಾರಿಯಲ್ಲಿ ಬೆದರಿದ್ದ ಆನೆ ನಿಯಂತ್ರಸಿದ ಹಿನ್ನೆಲೆ ಆನೆ ನಿಯಂತ್ರಿಸಿದ ಮಾವುತನಿಗೆ 3 ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ. ಸಚಿವರು, ಶಾಸಕರು ಬಹುಮಾನ ನೀಡಿ ಗೌರವಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮೆರವಣಿಗೆ ವೇಳೆ ಜನರ ಗಲಾಟೆಯಿಂದಾಗಿ ಗೋಪಾಲಸ್ವಾಮಿ ಆನೆ ಬೆದರಿತ್ತು. ಕೂಡಲೇ ಎಚ್ಚೆತ್ತ ಮಾವುತ ಆನೆಯನ್ನು ನಿಯಂತ್ರಿಸಿದ್ದರು