Select Your Language

Notifications

webdunia
webdunia
webdunia
webdunia

ಸಿನಿಮಿಯ ಶೈಲಿಯಲ್ಲಿ ಮಹಿಳೆಯೊಬ್ಬಳ ಸರಗಳವು

ಸಿನಿಮಿಯ ಶೈಲಿಯಲ್ಲಿ ಮಹಿಳೆಯೊಬ್ಬಳ ಸರಗಳವು
bangalore , ಶನಿವಾರ, 9 ಅಕ್ಟೋಬರ್ 2021 (21:35 IST)
ಮಹಿಳೆಯೊಬ್ಬರ ಸರಗಳವು ಮಾಡಿ ಪರಾರಿಯಾಗುತ್ತಿದ್ದ ಆರೋಪಿಬ್ಬನನ್ನು ಸಿನಿಮಿಯ ಶೈಲಿಯಲ್ಲಿ ಆಟೋ ಚಾಲಕರೊಬ್ಬರು ಸುಮಾರು ಎರಡು ಕಿ.ಮೀಟರ್ ಹಿಂಬಾಲಿಸಿ ಹಿಡಿದು ಪೆÇಲೀಸರಿಗೊಪ್ಪಿಸಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾಬಸಪೇಟೆ ನಿವಾಸಿ ಕೇಶವಮೂರ್ತಿ(31) ಬಂಧಿತ. ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 9.5 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
 ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಆಟೋ ಚಾಲಕ ರುದ್ರೇಶ್ ಎಂಬವರು ಖದೀಮ ಕೇಶವಮೂರ್ತಿಯನ್ನು ಸುಮಾರು 2 ಕಿ.ಮೀಟರ್ ಹಿಂಬಾಲಿಸಿ ಹಿಡಿದು ಪೆÇಲೀಸರಿಗೊಪ್ಪಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಚಿಕ್ಕಬಾಣವಾರ ನಿವಾಸಿ ಪುಷ್ಪ(32) ಎಂಬವರು ಪಕ್ಕದ ಮನೆಯ ಮಹಿಳೆಯೊಬ್ಬರ ಜತೆ ತಮ್ಮ ಒಂದು ವರ್ಷದ ಮಗು ಕರೆದುಕೊಂಡು ಸಮೀಪದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯಕ್ಕೆ ನಡೆದುಕೊಂಡು ಹೋಗಿದ್ದರು. ಇವರು ವಾಪಸ್ ಬರುವ ವೇಳೆ ಹಿಂದಿನಿಂದ ಬಂದ ಆರೋಪಿ, ಪುಷ್ಪ ಅವರ ಚಿನ್ನದ ಸರ ಕಸಿದುಕೊಂಡಿದ್ದಾನೆ. ಆ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಆರೋಪಿ, ಮಗುವಿನ ಸಮೇತ ಮಹಿಳೆಯನ್ನು ತಳ್ಳಿ ಸರ ಕಿತ್ತುಕೊಂಡು ಹೋಗಿದ್ದಾನೆ. ಅದರಿಂದ ಮಹಿಳೆಯ ಕೈ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ.
ಈ ಮಧ್ಯೆ ಆರೋಪಿ ಓಡುವಾಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲೇ ಇದ್ದ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಆಟೋ ಚಾಲಕ ರುದ್ರೇಶ್ ಅವರು ಆರೋಪಿಯನ್ನು ಸುಮಾರು ಎರಡು ಕಿ.ಮೀಟರ್ ಹಿಂಬಾಲಿಸಿದ್ದಾರೆ. ಆಗ ಆರೋಪಿ ಬಡಿಗೆಯಿಂದ ರುದ್ರೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೂ ಬಿಡದ ರುದ್ರೇಶ್ ಆರೋಪಿಯನ್ನು ಹಿಡಿದು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್‍ಐ ಎಂ.ಜೆ.ಶಿವರಾಜು ಮತ್ತು  ತಂಡ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.  ಆರೋಪಿ ಪಿಯುಸಿ ವ್ಯಾಸಂಗ ಮಾಡಿದ್ದು, ನರ್ಸಿಂಗ್ ಹೋಮ್‍ವೊಂದರಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡುತ್ತಿದ್ದ. ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಯಾವುದೇ ಕೆಲಸವಿಲ್ಲದೆ, ಜೀವನ ನಿರ್ವಹಣೆಗಾಗಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೆÇಲೀಸರು ಹೇಳಿದರು.
ಸೂಕ್ತ ಬಹುಮಾನ
ಧೈರ್ಯ ಪ್ರದರ್ಶಿಸಿ ಆರೋಪಿಯನ್ನು ಹಿಡಿದು ಪೆÇಲೀಸರಿಗೊಪ್ಪಿಸಿದ ಆಟೋ ಚಾಲಕ ರುದ್ರೇಶ್‍ಗೆ ನಗರ ಪೆÇಲೀಸ್ ಆಯುಕ್ತರು ಮತ್ತು ಉತ್ತರ ವಿಭಾಗ ಉಪ ಪೆÇಲೀಸ್ ಆಯುಕ್ತರು ಸೂಕ್ತ ಬಹುಮಾನ ಘೋಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಪ್ರಾಣಗಳ ಜತೆ ಇತರರ ಪ್ರಾಣವನ್ನು ಕಾಪಾಡಬೇಕು - ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್