Select Your Language

Notifications

webdunia
webdunia
webdunia
webdunia

ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾಣೆ

webdunia
bangalore , ಶನಿವಾರ, 9 ಅಕ್ಟೋಬರ್ 2021 (21:04 IST)
ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾಣೆಗೆ  ಮೂರು ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಸಿಂದಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನೇರ ಪೈಪೋಟಿ ನೀಡುತ್ತಿವೆ. ಎರಡು ಕ್ಷೇತ್ರಗಳತ್ತ ಮೂರು ಪಕ್ಷದ ಘಟಾನುಘಟಿ ನಾಯಕರು ಪ್ರಯಾಣ ಬೆಳೆಸುತ್ತಿದ್ದು, ಭಾನುವಾರ ದಿಂದ ಪ್ರಚಾರ ರಂಗೇರಲಿದೆ.
ನಾಮಪತ್ರ ಸಲ್ಲಿಕೆಯ ಕಾಲಾವಕಾಶ ಮುಕ್ತಾಯವಾಗಿದ್ದು, ಸೋಮವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಎರಡು ಕ್ಷೇತ್ರದಿಂದ 37 ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿದ್ದು, ಅ.13 ರ ನಂತರ ಎಷ್ಟು ಅಭ್ಯರ್ಥಿ ಗಳು ಉಪಚುನಾವಣೆ ಕಣದಲ್ಲಿದ್ದಾರೆ ಎಂಬುದು ಗೊತ್ತಾಗಲಿದೆ.
ಜೆಡಿಎಸ್ ಗೆ ಮಾಡು ಇಲ್ಲವೆ ಮಡಿ: ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಹಂತ ಹಂತವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಕೆಲವೇ ಕೆಲ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. 2018ರಲ್ಲಿ ನಡೆದ ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ನ ಮನುಗೂಳಿ ಗೆದ್ದಿದ್ದರು. ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರ ಉ.ಕ. ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಯಲಿದೆ.  ಒಂದು ರೀತಿಯಲ್ಲಿ ಜೆಡಿಎಸ್ ಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಹುಮ್ಮಸ್ಸಿನಿಂದ ಚುನಾವಣೆ ಕಣಕ್ಕೆ ಧುಮುಕಲಿದೆ ಬಿಜೆಪಿ:
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಗೆ ಸ್ಪರ್ಧೆ ನೀಡಲಿದ್ದು, ಪ್ರಚಾರ ಕಣವು ಮತ್ತಷ್ಟು ರಂಗೇರಲಿದೆ. ಬಿಜೆಪಿಯು ಉಪಚುನಾವಣೆಯಲ್ಲಿ ಸತತ ಗೆಲುವಿನ ನಗೆ ಬೀರಿದ್ದು, ಅದೇ ಹುಮ್ಮಸ್ಸಿನಲ್ಲಿ ಚುನಾವಣೆ ಕಣಕ್ಕೆ ಧುಮುಕಲಿದೆ.
 
 
57 ನಾಮಪತ್ರ ಸಲ್ಲಿಕೆ:
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ‌ ಒಟ್ಟು 29 ಅಭ್ಯರ್ಥಿಗಳಿಂದ 45 ನಾಮಪತ್ರ ಸಲ್ಲಿಕೆಯಾಗಿವೆ. ಸಿಂದಗಿ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳಿಂದ 12 ನಾಮಪತ್ರ ಸಲ್ಲಿಕೆಯಾಗಿವೆ. ಎರಡು ಕ್ಷೇತ್ರಗಳಿಂದ 57 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಹಿಂಪಡೆಯಲು ಅ.13 ರವರೆಗೆ ಕಾಲಾವಕಾಶ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ರಿತುರಾಜ್ ಅವಸ್ತಿ ನೇಮಕ-ಕೇಂದ್ರ ಸರ್ಕಾರ ಅಧಿಸೂಚನೆ