Select Your Language

Notifications

webdunia
webdunia
webdunia
webdunia

ಡಬಲ್‌ ಎಂಜಿನ್‌, ಡಬಲ್‌ ವೇಗದ ಅಭಿವೃದ್ಧಿ ಬಗ್ಗೆ ರಾಜ್ಯದ ಜನತೆಗೆ ನಂಬಿಕೆ ಇದೆ: ಅರುಣ್‌ ಸಿಂಗ್‌

ಡಬಲ್‌ ಎಂಜಿನ್‌, ಡಬಲ್‌ ವೇಗದ ಅಭಿವೃದ್ಧಿ ಬಗ್ಗೆ ರಾಜ್ಯದ ಜನತೆಗೆ ನಂಬಿಕೆ ಇದೆ: ಅರುಣ್‌ ಸಿಂಗ್‌
bangalore , ಶನಿವಾರ, 21 ಜನವರಿ 2023 (18:50 IST)
ರಾಜ್ಯದ ಜನತೆಗೆ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯತೆ ಮತ್ತು ಅಭಿವೃದ್ಧಿ ಕೆಲಸಗಳ ವೇಗದ ಬಗ್ಗೆ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ನಾಯತಕತ್ವ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಚಿಕ್ಕಬಳ್ಳಾಪುರದಲ್ಲಿ ವಿಜಯ ಸಂಕಲ್ಪ ಅಭಿಯಾನದ ವೇಳೆ ಮಾತನಾಡಿದ ಅವರು, ಅಧಿಕಾರಕಾರದಲ್ಲಿದ್ದಾಗ ಕಾಂಗ್ರೆಸ್‌ ಭ್ರಷ್ಟಾಚಾರ, ಸಮಯ ವ್ಯರ್ಥ ಮಾಡಿದ್ದೇ ಸಾಧನೆ. ಕೇವಲ ಚಿಕ್ಕಬಳ್ಳಾಪುರ ಒಂದು ಜಿಲ್ಲೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಅನ್ನುವ ಬಗ್ಗೆ ಮಾತನಾಡಲಿ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಈ ಒಂದು ಜಿಲ್ಲೆಯಲ್ಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ.   3124 ಜನಕ್ಕೆ ಪಿಎಂ  ಆವಾಸ್‌ ಯೋಜನೆ ಅಡಿ ಮನೆಗಳು ಸಿಕ್ಕಿವೆ. ಪಿಎಂ ಕಿಸಾನ್‌ ಯೋಜನೆಯಡಿ  1 ಲಕ್ಷ  19 ಸಾವಿರಕ್ಕೂ ಅಧಿಕ ಜನರ ಅವರ ಅಕೌಂಟ್‌ಗೆ ಪ್ರತಿ ವರ್ಷ 10 ಸಾವಿರ ರೂ. ನೇರ ಪಾವತಿಯಾಗುತ್ತಿದೆ. ಪಿಎಂ ಮಾತೃತ್ವ ಬಂಧನ ಯೋಜನೆಯ ಲಾಭ 72,000 ಜನರಿಗೆ ಸಿಗುತ್ತಿದೆ.  ಈ ಜಿಲ್ಲೆಯ 52,160 ಹಿರಿಯರಿಗೆ ಮಾಶಾಸನ  ಸಿಗುತ್ತಿದೆ ಎಂದರು.
 
 
ಸಿದ್ದು ಅಧಿಕಾರ ಮಾಡುತ್ತಿದ್ದಾಗ ಮತ್ತು ಯುಪಿಎ ಅಧಿಕಾರದಲ್ಲಿದ್ದಾಗ ಜನರಿಗೆ ಕುಡಿಯಲು ನೀರು ಕೂಡ ಕೊಡುತ್ತಿರಲಿಲ್ಲ. ಆದರೆ ಜಲಜೀವನ್‌ ಮಿಷನ್‌ ಯೋಜನೆ ಮೂಲಕ  ಚಿಕ್ಕಬಳ್ಳಾಪುರದಲ್ಲಿ 54,866  ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳೀಯ ಶಾಸಕ ಸುಧಾಕರ್‌ ಈ ಎಲ್ಲಾ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಶ್ರಮಿಸಿದ್ದಾರೆ.  ಮೆಡಿಕಲ್‌ ಕಾಲೇಜು ಹಿಂದೆ ಆಡಳಿತ ಮಾಡಿದ ಸರ್ಕಾರಳು ಈ ಜಿಲ್ಲೆಗೆ ಕೊಟ್ಟಿರಲಿಲ್ಲ. ಆದರೆ ಶಾಸಕ ಸುಧಾಕರ್‌ ಅವರು ಸತತ ಪ್ರಯತ್ನ ಮಾಡಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೂಲಕ ಇಲ್ಲಿಗೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸಿದ್ದರು. ಅದರ ಕಟ್ಟಡ ಕೂಡ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಇದರ ಉದ್ಘಾಟನೆಯೂ ನಡೆಯುಲಿದೆ. ಉಜ್ವಲಾ ಯೋಜನೆಯಡಿ ಗ್ಯಾಸ್‌ ಕನೆಕ್ಷನ್‌ ನೀಡಲಾಗಿದೆ. ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆಯಡಿ ಈ ಒಂದು ಜಿಲ್ಲೆಯಲ್ಲಿ  6,314ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್‌ ಕಲ್ಪಿಸಲಾಗಿದೆ ಎಂದು ತಿಳಿಸಿದರು. 
 
ಕೋವಿಡ್‌ ಸಮಯದಲ್ಲಿ ಉಚಿತ ಪಡಿತರ ವಿತರಿಸಿ ಬಡವರ ಸಂಕಷ್ಟದ ಕಾಲದಲ್ಲಿ ಸರ್ಕರ ಮಿಡಿದಿದೆ. ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್‌ ನೀಡುತ್ತಿದೆ. 
ಸಿದ್ದರಾಮಯ್ಯ ಅವರೇ ಇದು ನಮ್ಮ ಸರ್ಕಾರದ ಸಾಧನೆ. ನಮ್ಮಲ್ಲಿ ನಾಯಕರು ಇದ್ದಾರೆ. ಹೇಳಿ ಕೊಳ್ಳಲು ನಾವು ಮಾಡಿದ ಕೆಲಸವಿದೆ. ಕಾರ್ಯಕರ್ತರ ಸೈನ್ಯವಿದೆ.  ಈ ಮೂಲಕ 150 ಸೀಟುಗಳನ್ನು ಗೆಲ್ಲುವುದು ಖಚಿತ.  ಕಾಂಗ್ರೆಸ್‌ ಬಳಿ ನಾಯಕರೂ ಇಲ್ಲ. ಕೆಲಸವೂ ಇಲ್ಲ. ಹೀಗಾಗಿ ರಾಜ್ಯದಲ್ಲಿ ಅವರು ಗೆಲ್ಲುವುದು ಇಲ್ಲ ಎಂದು ಹೇಳಿದರು. 
 
ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.  ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಗಳಿಗೆ ಸ್ಟಿಕ್ಕರ್‌,  ಗೋಡೆಗೆ ಪೈಂಟಿಂಗ್‌ ಮಾಡುವುದು ಜೊತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪುವಂತೆ ಮಾಡಲು ಪ್ಲಾನ್‌ ಮಾಡಲಾಗಿದೆ. ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರ ನೇತೃತ್ವದಲ್ಲಿ 150ಕ್ಕೂ ಅಧಿಕ ಸೀಟುಗಳೊಣಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ದ್ವಾರದಲ್ಲಿ ತಲೆ ಎತ್ತಲಿವೆ ಪ್ರಥಮ ಚಿಕಿತ್ಸಾ ಕೊಠಡಿ ಹಾಗೂ ನಮ್ಮ ಕ್ಲಿನಿಕ್