Select Your Language

Notifications

webdunia
webdunia
webdunia
webdunia

ಜಲ ಪ್ರಳಯ: ಸಂತ್ರಸ್ತರ ನೆರವಿಗೆ ಮುಂದಾದ ಗಡಿ ಜಿಲ್ಲೆಯ ಜನರು

ಜಲ ಪ್ರಳಯ: ಸಂತ್ರಸ್ತರ ನೆರವಿಗೆ ಮುಂದಾದ ಗಡಿ ಜಿಲ್ಲೆಯ ಜನರು
ಚಿಕ್ಕೋಡಿ , ಬುಧವಾರ, 22 ಆಗಸ್ಟ್ 2018 (20:03 IST)
ಮಲೆನಾಡು ಪ್ರದೇಶಗಳಲ್ಲಿ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತರ ನೆರವಿಗಾಗಿ ಗಡಿನಾಡಲ್ಲಿ  ದೇಣಿಗೆ ಸಂಗ್ರಹ ಮಾಡಲಾಯಿತು.

ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಶ್ರಿ ಅಲ್ಲಮಪ್ರಭು ಅನ್ನದಾನ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಲಾಯಿತು. ಕಳೆದ ಹಲವು ದಿನಗಳಿಂದ ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಭಾರಿ ಪ್ರಮಾಣ ಮಳೆ ಹಾಗೂ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಇದರಿಂದ ಅಲ್ಲಿಯ ಸ್ಥಳೀಯರು ಮನೆ- ಮಠಗಳನ್ನು ಕಳೆದು ಅನಾಥರಾಗಿದ್ದಾರೆ. ಸರ್ಕಾರ ನಿರ್ಮಾಣ ಮಾಡಿದ ಪುನರ್ವಸತಿ‌ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ  ಕರ್ನಾಟಕ ಜನತೆಯೆ ಕೊಡಗಿನ ಜನರಿಗೆ ಸಹಾಯಕ್ಕೆ ನಿಂತಿದೆ. ಚಿಕ್ಕೋಡಿ ಪಟ್ಟಣದಲ್ಲಿ ಸಮಾಜ ಸೇವಕ ಚಂದ್ರ ಕಾಂತ ಹುಕ್ಕೇರಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಜನರಿಂದ ದೇಣಿಗೆಯನ್ನು ಸಂಗ್ರಹಿಸಿ ಸಂಕಷ್ಟದಲ್ಲಿ ಸಿಲುಕಿದ  ಜನರ ಸಹಾಯಕ್ಕೆ ಮುಂದಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಮಹೋತ್ಸವದಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಸಂಭ್ರಮ