ಜನರು ಬಯಸಿದ್ರೆ ರಾಜಕೀಯಕ್ಕೆ ಬರುತ್ತೇನೆ: ಯದುವೀರ್ ಒಡೆಯರ್

Webdunia
ಸೋಮವಾರ, 2 ಏಪ್ರಿಲ್ 2018 (14:59 IST)
ಜನರು ಬಯಸಿದರೆ, ಅವರಿಗೆ ಅನುಕೂಲ ಆಗುತ್ತದೆ ಅಂದ್ರೆ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುತ್ತೇನೆ, ಆದ್ರೆ ಸದ್ಯದ ನನ್ನ ಹಾದಿಯಲ್ಲಿ ರಾಜಕೀಯ ಇಲ್ಲ ಎನ್ನುವ ಮೂಲಕ ಪ್ರಜೆಗಳ ಒತ್ತಡ ಬಂದರೆ ನಾನು ರಾಜಕೀಯಕ್ಕೂ ಸೈ ಎಂದು ಮೈಸೂರಿನ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. 
ಇದೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ಕಲ್ಲಿನಕೋಟೆಗೆ ಭೇಟಿ ನೀಡಿ ಇತಿಹಾಸದ ಬಗ್ಗೆ ಮಾಹಿತಿ ಪಡೆದ ಯದುವೀರ್, ಭಾರತದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರೋ ಜ್ಯೋತಿರಾಜನ ಸಾಹಸ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ರು, ನಂತರ ಕೋಟೆಯಲ್ಲಿರುವ ಗಣಪತಿ ಹಾಗೂ ಪಾಳೇಗಾರರ ಅಧಿದೇವತೆ ಏಕನಾಥೇಶ್ವರಿ ದರುಶನ ಪಡೆದ್ರು, 
 
ಈ ವೇಳೆ ರಾಜರನ್ನು ನೋಡಲು ಮುಗಿಬಿದ್ದ ಪ್ರವಾಸಿಗರ ಜೊತೆ ನಿಂತು ಸೆಲ್ಫಿಗೆ ಪೋಸ್ ನೀಡಿದ್ರು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್, ನಾನು ತುಂಬಾ ಸಲ ಕೋಟೆ ನೋಡಲು ಬರಬೇಕೆಂದಿದ್ದೆ, ಈಗ ಸಮಯ ಸಿಕ್ಕಿದೆ, ಹೀಗಾಗಿ ಕೋಟೆಗೆ ಭೇಟಿ ನೀಡಿ ಇತಿಹಾಸ ತಿಳಿದುಕೊಂಡಿದ್ದೇನೆ, 
 
ಕರ್ನಾಟಕದ ಎಲ್ಲಾ ರಾಜ ಮನೆತನಗಳಿಗೂ ಅವೀನಾಭಾವ ಸಂಬಂಧ ಇದೆ, ಈ ಜಿಲ್ಲೆಯಲ್ಲಿ ನಮ್ಮ ಅಜ್ಜಿಯವರ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಗಾಯಿತ್ರಿ ಜಲಾಶಯ ಮತ್ತು ವಾಣಿವಿಲಾಸ ಸಾಗರ ಇದೆ, ಇದನ್ನೆಲ್ಲಾ ನೋಡಲು ನನಗೆ ಸಂತಸವಾಗಿದೆ ಅಂದ್ರು, 
 
ರಾಜಕೀಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯುವರಾಜ ಯದುವೀರ್, ನಾನು ಈಗಾಗಲೇ ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ, ಅಮಿತ್ ಷಾ ಅವರು ಮೈಸೂರಿಗೆ ಆಗಮಿಸಿದ್ದ ವೇಳೆ ಅರಮನೆಗೆ ಭೇಟಿಕೊಟ್ಟು, ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ನನ್ನ ಜೊತೆ ಸೌಹಾರ್ಧಯುತವಾಗಿ ಮಾತನಾಡಿದ್ದಾರೆ, ರಾಜ್ಯಸಭೆಗೆ ಆಫರ್ ನೀಡಿರುವ ಬಗ್ಗೆ ನನಗೇನು ತಿಳಿದಿಲ್ಲ, ನಾವು ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಚನ್ನಾಗಿದ್ದೇವೆ, ಹೀಗಾಗಿ ರಾಜ್ಯವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಪಕ್ಷ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,
 
 ಆದರೆ ನಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಾಗಲೀ, ಪ್ರಚಾರ ಮಾಡುವುಕ್ಕಾಗಲೀ ಬರುವುದಿಲ್ಲ, ಒಂದು ವೇಳೆ ಮುಂದಿನ ದಿನಗಳಲ್ಲಿ ಜನರು ಬಯಸಿದ್ರೆ, ನಮ್ಮಿಂದ ಅವರಿಗೆ ಒಳ್ಳೆಯದಾಗುತ್ತದೆ ಅನ್ನುವುದಾರೆ ರಾಕಕೀಯಕ್ಕೆ ಬರುವ ಬಗ್ಗೆ ಯೋಚಿಸುತ್ತೇನೆ ಅಂದ್ರು, ಇನ್ನೂ ಕೋಟೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ನನಗೆ ಚಿಂತನೆ ಇದ್ದು, ಎಲ್ಲಾ ರಾಜಮನೆತನಗಳ ಐತಿಹಾಸಿಕ ಸ್ಥಳಗಳನ್ನು ಸಂಪರ್ಕಿಸುವ ಕಾರಿಡಾರ್ ಮಾಡಬೇಕೆಂಬ ಯೋಚನೆ ನನಗಿದೆ, ಅದರ ಜೊತೆಗೆ ಪ್ರವಾಸಿಗರೂ ಕೂಡ ಇಂತಹ ಐತಿಹಾಸಿಕ ಸ್ಥಳಗಳ ಸ್ವಚ್ಚತೆ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ನಾಯಕರ ಮಾತಿಗೆ ರೈತರು ಮರಳಾಗಬೇಡಿ: ಸಿಎಂ ಸಿದ್ದರಾಮಯ್ಯ

ಅದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದಿದ್ಯಾಕೆ ಎಚ್ ಡಿ ಕುಮಾರಸ್ವಾಮಿ

Meerut Saurabh Rajput Case: ಊರೇ ಬಿಡಲು ಮುಂದಾದ ಆರೋಪಿ ಮುಸ್ಕಾನ್ ಕುಟುಂಬ

ಗಾಲಿಕುರ್ಚಿಯಲ್ಲಿ ಕೂತಿದ್ದ ಪ್ರತೀಕಾ ರಾವಲ್‌ ನೋಡಿ ಮೋದಿ ಏನ್ಮಾಡಿದ್ರೂ ನೋಡಿ

ಬೆಂಗಳೂರು ಎರ್ನಾಕುಲಂ ಸೇರಿದಂತೆ ನಾಲ್ಕು ವಂದೇ ಭಾರತ್ ರೈಲುಗಳಿಗೆ ನರೇಂದ್ರ ಮೋದಿ ಚಾಲನೆ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments