ಬೆಂಗಳೂರು ಐಟಿ ಸಿಟಿ, ಟ್ರಾಫಿಕ್ ಸಿಟಿ ಎಂದೆಲ್ಲಾ ಕರೆಸಿಕೊಂಡಿದ್ದರೂ, ಈ ಮಹಾನಗರ ತನ್ನ ಐತಿಹಾಸಿಕ ಪರಂಪರೆಯನ್ನೂ ಹಾಗೆಯೇ ಉಳಿಸಿಕೊಂಡಿದೆ. ದೇಸೀ ಸೊಗಡಿನ ಹಬ್ಬ, ಜಾತ್ರೆಗಳು ಇಲ್ಲಿ ಆಗಿಂದಾಗೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಉತ್ತಮ ಸಾಕ್ಷಿ, ಅತ್ಯದ್ಭುತವಾಗಿ ನಡೆಯುವ ಬಸವನಗುಡಿ ಕಡಲೇಕಾಯಿ ಪರಿಷೆ. ನಿನ್ನೆಯಿಂದ ಆರಂಭಗೊಂಡಿರುವ ಕಡಲೇಕಾಯಿ ಪರಿಷೆಗೆ ಜನಸಾಗರವೇ ಹರಿದುಬರುತ್ತಿದೆ. ಮಹಾನಗರ ಅದೆಷ್ಟೇ ಅಭಿವೃದ್ಧಿಯಾಗಿದ್ದರೂ ಇಂದಿಗೂ ಅದೆಷ್ಟೋ ಏರಿಯಾಗಳು ತಮ್ಮ ಹಳೇ ಶ್ರೀಮಂತ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿವೆ. ಹಲವು ದೇವಾಲಯಗಳಿಂದ ಸುತ್ತುವರೆದಿರುವ ಬಸವನಗುಡಿಯಲ್ಲಿ ಪೂಜೆ ಪುನಸ್ಕಾರಗಳು, ಹಬ್ಬಹರಿದಿನಗಳು, ಜಾತ್ರೆಗಳು ಜೋರಾಗಿಯೇ ನಡೆಯುತ್ತಿದೆ . ಇನ್ನು ಕಡಲೇಕಾಯಿ ಪರಿಷೆಗೆ ಜನ ಸಾಗರ ಹರಿದು ಬರುತ್ತಿದ್ದೆ.