Select Your Language

Notifications

webdunia
webdunia
webdunia
Wednesday, 2 April 2025
webdunia

ಸಂಬಳವಿಲ್ಲದೇ ಹೊರಗುತ್ತಿಗೆ ನೌಕರರ ʼಅರಣ್ಯʼ ರೋಧನ

Payment of Outsourced Employees without Salary
bangalore , ಭಾನುವಾರ, 13 ಮಾರ್ಚ್ 2022 (20:36 IST)
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ಕಾಡ್ಗಿಚ್ಚು, ಹಾಗೂ ಕಳ್ಳ ಭೇಟೆಗಾರರಿಂದ ಸಂರಕ್ಷಣೆ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳವಾಗಿಲ್ಲ. ಇದರಿಂದ ಸಂಕಷ್ಟಕೊಳಗಾಗಿರುವ ನೌಕರರು ಪ್ರತಿಭಟನೆ ನಡೆಸಿದ್ದಾರ.
ಬೇಸಿಗೆ ಕಾಲ ಆರಂಭವಾಯಿತೆಂದರೆ ನಾಗರಹೊಳೆ ಅರಣ್ಯ ಪ್ರದೇಶ ಹಾಗೂ ಬಂಡೀಪುರ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಹೈ ಅಲರ್ಟ್ ಶುರುವಾಗುತ್ತದೆ‌. ಬೇಸಿಗೆ ಕಾಲವಾದ್ದರಿಂದ ಮರ ಗಿಡಗಳು, ಹಲ್ಲುಗಳು ಒಣಗಿ ಬೆಂಕಿ ಹತ್ತಿಕೊಳ್ಳುವ ಸಂಭವವಿರುತ್ತದೆ. ಹಾಗಾಗಿ ಅರಣ್ಯ ವೀಕ್ಷಕರು ( ಫಾರೆಸ್ಟ್ ವಾಚರ್ಸ್) ಕಾಡ್ಗಿಚ್ಚಿನಿಂದ ಕಾಡನ್ನು ಸಂರಕ್ಷಿಸಲು ದಿನದ 24 ಗಂಟೆಗಳ ಕಾಲ ಪೈರ್ ಲೈನ್ ಮಾಡಲು ಕಾಡನ್ನು ಕಾಯುತ್ತ ಕಾಡಲ್ಲೇ  ಇರಲೇಬೇಕು. ಕಾಡಿನಲ್ಲಿ ಪ್ರಾಣಿಗಳು ಇರುವುದರಿಂದ ಅವುಗಳಿಂದಲೂ ರಕ್ಷಣೆ ಪಡೆದು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಡನ್ನು ರಕ್ಷಣೆ ಮಾಡುವ ಕೆಲಸವನ್ನು ಅರಣ್ಯ ವೀಕ್ಷಕರು ಮಾಡಯತ್ತಾರೆ. ಆದರೆ ಅರಣ್ಯ ವೀಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವಾಗಿಲ್ಲ ಹಾಗಾಗಿ ಅವರು ಕೆಲಸಕ್ಕೆ ಹೋಗದೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೊರಗುತ್ತಿಗೆ ಆದಾರದ ಮೇಲೆ ನಾಗರಹೊಳೆಯಲ್ಲಿ 300 ಮಂದಿ ಅರಣ್ಯ ವೀಕ್ಷಕರು ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ಅರಣ್ಯ ವೀಕ್ಷಕರು, ಕಚೇರಿ ಸಿಬ್ಬಂದಿ, ಹಾಗೂ ಡ್ರೈವರ್ ಗಳು ಸೇರಿದ್ದಾರೆ. ಇವರಿಗೆ ನಾಲ್ಕು ತಿಂಗಳಿನಿಂದ ಸಂಬಳವಾಗಿಲ್ಲ, ಬಂಡೀಪುರದಲ್ಲಿ 250 ಮಂದಿ ಕೆಲಸ ಮಾಡುತ್ತಿದ್ದು, ಇವರಿಗೆ 2 ತಿಂಗಳಿನಿಂದ ಸಂಬಳವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

16 ವರ್ಷದ ಬಾಲಕಿಗೆ ಅಮಲು ಬರಿಸುವ ಔಷಧಿ ನೀಡಿ ಸರಣಿ ಅತ್ಯಾಚಾರ