ಹಾವೇರಿ: ಇತ್ತೀಚೆಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳೆಲ್ಲಾ ಸ್ಕೂಟಿ ಬಿಟ್ಟುಕೊಂಡು ರಸ್ತೆಯಲ್ಲಿ ಓಡಾಡುವುದನ್ನು ಗಮನಿಸುತ್ತೇವೆ. ಆದರೆ ಅಂತಹ ಮಕ್ಕಳ ಪೋಷಕರು ಇದನ್ನು ತಪ್ಪದೇ ಗಮನಿಸಬೇಕು.
ಅಪ್ರಾಪ್ತ ಮಕ್ಕಳ ಕೈಯಲ್ಲಿ ವಾಹನ ನೀಡಬಾರದು ಎಂದು ನಿಯಮವಿದೆ. 18 ವರ್ಷದ ಬಳಿಕ ಪರವಾನಗಿ ಪಡೆದೇ ವಾಹನ ಓಡಿಸಬೇಕು. ಆದರೆ ಎಷ್ಟೋ ಪೋಷಕರೇ ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಓಡಿಸಲು ಅವಕಾಶ ಕೊಡುತ್ತಾರೆ. ಆದರೆ ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಇದೀಗ ರಾಣೆಬೆನ್ನೂರಿನಲ್ಲಿ ಇಂತಹದ್ದೇ ತಪ್ಪು ಮಾಡಿದ ಪೋಷಕರೊಬ್ಬರು ಬರೋಬ್ಬರಿ 27, 000 ರೂ. ದಂಡ ತೆರಬೇಕಾಗಿ ಬಂದಿದೆ. ದಿಳ್ಳೆಪ್ಪ ಕಾಟಿ ಎಂಬವರು ತಮ್ಮ ಅಪ್ರಾಪ್ತ ಮಗನಿಗೆ ಬೈಕ್ ಓಡಿಸಲು ಕೊಟ್ಟಿದ್ದರು. ಆದರೆ ಆತ ಅಪಘಾತ ಮಾಡಿಕೊಂಡಿದ್ದ. ಹೀಗಾಗಿ ಪ್ರಕರಣ ದಾಖಲಾಯಿತು.
ಈ ಸಂಬಂಧ ಕೋರ್ಟ್ ನಲ್ಲಿ ವಿಚಾರಣೇ ನಡೆಯಿತು. ಈ ವೇಳೆ ವಿವರ ತಿಳಿದುಕೊಂಡ ನ್ಯಾಯಾಧೀಶರು ದಿಳ್ಳೆಪ್ಪ ಕಾಟಿಗೆ 27 ಸಾವಿರ ರೂ. ದಂಡ ತೆರಲು ಸೂಚಿಸಿದೆ. ಜೊತೆಗೆ ಅಪ್ರಾಪ್ತ ಮಗನಿಗೆ ವಾಹನ ನೀಡದಂತೆ ಎಚ್ಚರಿಕೆಯನ್ನೂ ನೀಡಿದೆ. ಅಪ್ರಾಪ್ತರಿಗೆ ವಾಹನ ನೀಡುವ ಎಷ್ಟೋ ಪೋಷಕರಿಗೆ ಇದು ಪಾಠವಾಗಲಿದೆ.