Select Your Language

Notifications

webdunia
webdunia
webdunia
webdunia

ರಂಗೇರಿದ ಉಪ ಚುನಾವಣಾ ಅಖಾಢ: ನಾನು ಟಿಕೆಟ್‌ ಆಕಾಂಕ್ಷಿಯಲ್ಲ ಎಂದ ನಿರಾಣಿ

former minister Murugesh Nirani

Sampriya

ನವದೆಹಲಿ , ಗುರುವಾರ, 17 ಅಕ್ಟೋಬರ್ 2024 (15:38 IST)
Photo Courtesy X
ನವದೆಹಲಿ: ಕರ್ನಾಟಕದ ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮೂರು ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭವಾಗಿದೆ.

ಹಾವೇರಿಯ ಸಂಸದ ಬಸವರಾಜ್ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿರುವ ಬೆನ್ನಲ್ಲೇ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ನನ್ನ ಹೆಸರು ಕೇಳಿ ಬರುತ್ತಿದೆ. ಮತ್ತೊಂದು ಜಿಲ್ಲೆಗೆ ಹೋಗಿ ನಾನು ಸ್ಪರ್ಧೆ ಮಾಡುವುದು ಸರಿ ಅಲ್ಲ, ನಾನು ಆಕಾಂಕ್ಷಿಯೂ ಅಲ್ಲ ಎಂದು ನಿರಾಣಿ ಹೇಳಿದ್ದಾರೆ.

ಬಸವರಾಜ್‌ ಬೊಮ್ಮಾಯಿ ಅವರ ಪುತ್ರಿ ಭರತ್ ಬೊಮ್ಮಾಯಿ ಸೇರಿ 60 ಮಂದಿ ಸ್ಪರ್ಧೆಗೆ ಅರ್ಜಿ ಹಾಕಿದ್ದಾರೆ. ಆ ಕ್ಷೇತ್ರದಲ್ಲೂ ಪಂಚಮಸಾಲಿ ಸಮಾಜದವರು ಇದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಅಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.  

ಪಕ್ಷಕ್ಕಾಗಿ ದುಡಿದವರು ಅಲ್ಲಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಅಥಾವ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ನಾನು ಅಲ್ಲಿಂದ ಸ್ಫರ್ಧೆ ಬಯಸುವುದಿಲ್ಲ, ಹೈಕಮಾಂಡ್ ಹಾಕುವ ಅಭ್ಯರ್ಥಿಯನ್ನು ಅಂತಿಮವಾಗಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು, ನಾವು ಆ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿರುವ ಶೇಖ್ ಹಸೀನಾಗೆ ಮತ್ತೆ ಸಂಕಷ್ಟ: ಕೋರ್ಟ್‌ನಿಂದ ಬಂಧನ ವಾರೆಂಟ್ ಜಾರಿ