Select Your Language

Notifications

webdunia
webdunia
webdunia
webdunia

ಡೆಂಗ್ಯೂ ಜತೆಗೆ ಇದೀಗ ಇಲಿ ಜ್ವರದ ಭೀತಿ, ಹಾವೇರಿಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿ

ಡೆಂಗ್ಯೂ ಜತೆಗೆ ಇದೀಗ ಇಲಿ ಜ್ವರದ ಭೀತಿ, ಹಾವೇರಿಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿ

Sampriya

ಹಾವೇರಿ , ಸೋಮವಾರ, 8 ಜುಲೈ 2024 (15:10 IST)
Photo Courtesy X
ಹಾವೇರಿ: ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಹಾವೇರಿ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿಯಾಗಿದೆ. ಮೃತರನ್ನು ಹಾನಗಲ್ ತಾಲ್ಲೂಕಿನ ಅರಳೇಶ್ವರ ಗ್ರಾಮದ ಉಮೇಶ್(72) ಎಂದು ಗುರತಿಸಲಾಗಿದೆ.

 ಕಳೆದ 15ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಇಲಿ ಜ್ವರ ಇರುವುದು ಪತ್ತೆಯಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಇದೀಗ ಕೊನೆಯುಸಿರೆಳೆದಿದ್ದು, ಹಾವೇರಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇದೀಗ ನಿನ್ನೆ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ.

ಇನ್ನು ಕಳೆದ ಕೆಲ ದಿನಗಳಿಂದ ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಡುಗಡೆ ಮಾಡಿದೆ. ಇದೀಗ ಡೆಂಗ್ಯೂ ರೋಗದ ಜತೆಗೆ ಇಲಿ ಜ್ವರದ ಭೀತಿಯೂ ಶುರುವಾಗಿದೆ.

ಇನ್ನು ಮತ್ತೊಂದೆಡೆ ಇಲಿ ಜ್ವರ ಕಾಣಿಸಿಕೊಂಡ ಬಾಲಕನಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಜ್ವರ ಕಾಣಿಸಿಕೊಂಡ ಹಿನ್ನಲೆ ಹಾವೇರಿ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ. ಮೊದಲು 12 ವರ್ಷದ ಬಾಲಕನಿಗೆ ಜಾಂಡೀಸ್ ರೋಗ ಕಾಣಿಸಿಕೊಂಡಿತ್ತು. ಗುಣಮುಖನಾದ ಬಾಲಕನಲ್ಲಿ ಮತ್ತೇ ಜ್ವರ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕನ ರಕ್ತಪರೀಕ್ಷೆಯ ನಂತರ ಬಾಲಕನಿಗೆ ಇಲಿ ಜ್ವರ ಪತ್ತೆಯಾಗಿದೆ. ಬಾಲಕ ಆರೋಗ್ಯ ಸ್ಥಿರವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿರುವ ಯುವತಿಯರೇ ಎಚ್ಚರ..ಎಚ್ಚರ