Select Your Language

Notifications

webdunia
webdunia
webdunia
Sunday, 13 April 2025
webdunia

ಬೆಂಗಳೂರಿನಲ್ಲಿರುವ ಯುವತಿಯರೇ ಎಚ್ಚರ..ಎಚ್ಚರ

Bangalore Weather

Sampriya

ಬೆಂಗಳೂರು , ಸೋಮವಾರ, 8 ಜುಲೈ 2024 (14:55 IST)
Photo Courtesy X
ಬೆಂಗಳೂರು: ಕೆಲಸಕ್ಕಾಗಿ ಅದೆಷ್ಟೋ ಮಂದಿ ಯುವತಿಯರು ತಮ್ಮ ಊರನ್ನು ಬಿಟ್ಟು ಸಿಲಿಕಾನ್ ಸಿಟಿಯಲ್ಲಿ ಬಂದು ಕೆಲಸ ಕಂಡುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಯುವತಿಯರಿಗೆ ಅಷ್ಟೊಂದು ಸೇಫ್‌ ಅಲ್ಲ ಎಂಬುದು ಸಾಬೀತು ಆಗುತ್ತಲೇ ಇದೆ. ಇದೀಗ ವಿವಿ ಪುರಂನಲ್ಲಿ ಕಾಮುಕನನೊಬ್ಬ ತನ್ನ ಕೀಟಲೆ ಜೋರಾಗಿದೆ.

ಸಜ್ಜನರಿರುವ ಈ ನಗರದಲ್ಲಿ ಕಾಮುಕನೊಬ್ಬ ಯುವತಿಯರಿಗೆ  ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಅಸಹ್ಯವಾಗಿ ವರ್ತಿಸಿ ಎಸ್ಕೇಪ್ ಆಗುತ್ತಿರುವುದು ಬೆಳಕಿಗೆ ಬಂದಿದೆ.  

ಹೆಚ್ಚಾಗಿ ಯುವತಿಯರು ಇರುವ ಕಾಲೇಜನ್ನು ನೋಡಿಕೊಂಡು, ಸ್ಕೂಟಿಯಲ್ಲಿ ಮಾಸ್ಕ್‌ ಧರಿಸಿಕೊಂಡು ಬರುವ ಕಾಮುಕ ಯುವತಿಯರು ಇರುವುದನ್ನು ನೋಡಿ ತನ್ನ ಖಾಸಗಿ ಅಂಗವನ್ನು ತೋರಿಸಿ ಅಲ್ಲಿಂದ್ದ ಪರಾರಿಯಾಗುತ್ತಾನೆ. ಈ ರೀತಿಯ ಯುವತಿಯೊಂದಿಗೆ ಅಸಹ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿನಿಯೊಬ್ಬರು ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಕಾಮುಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜನಪರ ಕೆಲಸ ನೀವು ಜನರಿಗೆ ತಲುಪಿಸಬೇಕು: ಡಿಸಿಗಳಿಗೆ ಸಿದ್ದರಾಮಯ್ಯ ಕ್ಲಾಸ್