Publish Date: Mon, 18 Mar 2019 (13:40 IST)
Updated Date: Mon, 18 Mar 2019 (13:42 IST)
ದೆಹಲಿಯಲ್ಲಿ ರಾಷ್ಟ್ರಪತಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ, ಸಾಲುಮರದ ತಿಮ್ಮಕ್ಕ ಅವರನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಸದಾಶಿವನಗರ ಬಿಡಿಎ ನಿವಾಸದಲ್ಲಿ ಅಭಿನಂದಿಸಿದರು.
ಮಾಗಡಿಯ ಸಣ್ಣ ತಾಲೂಕಿನಿಂದ ಬಂದ ತಿಮ್ಮಕ್ಕ, ತಮಗೆ ಮಕ್ಕಳಾಗಲಿಲ್ಲ ಎಂಬ ಬೇಸರಿಂದ ವೃಕ್ಷಗಳನ್ನು ಬೆಳೆಸುವ ಮೂಲಕ ನಿರಾಸೆ ಸರಿದೂಗಿಸುವ ಕೆಲಸ ಮಾಡಿದ್ದಾರೆ. 4 ಕಿ.ಮೀ. ಮರಗಳನ್ನು ಬೆಳೆಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ.
ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಇವರ ಕೆಲಸ ನಮ್ಮೆಲ್ಲರಿಗೂ ಮಾದರಿ. ಇದನ್ನು ಗುರುತಿಸಿದ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.