Select Your Language

Notifications

webdunia
webdunia
webdunia
webdunia

ತುಮಕೂರು ನಮಗೇ ಇರಲಿ ಎಂದ ಪರಂ

ತುಮಕೂರು ನಮಗೇ ಇರಲಿ ಎಂದ ಪರಂ
ತುಮಕೂರು , ಸೋಮವಾರ, 18 ಮಾರ್ಚ್ 2019 (13:22 IST)
ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಜೆಡಿಎಸ್ ಗೆ ಬಿಟ್ಟು ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಖಡಕ್ ಹೇಳಿಕೆ
ನೀಡಿದ್ದಾರೆ.

ನಮ್ಮ ವರಿಷ್ಠರ ಗಮನಕ್ಕೆ ಈ ಬೆಳವಣಿಗೆ ಬಗ್ಗೆ ತಂದಿದ್ದಿನಿ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮುದ್ದು ಹನುಮೇಗೌಡ ಗೆದ್ದಿದ್ರು. ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆದ್ದಿದ್ರು. ಗೆದ್ದ ಅಭ್ಯರ್ಥಿಗಳ ಬದಲಾವಣೆ ಬೇಡ ಅಂತ ಮೈತ್ರಿ ಆಗಿತ್ತು. ನಾವು ಮಂಡ್ಯ ,ಹಾಸನ‌ ಕೇಳೋದು ಬೇಡ ಅಂತ ಆಗಿತ್ತು. ಈ ಸಂಬಂಧ ಸ್ಕ್ರಿನಿಂಗ್ ಕಮಿಟಿಯಲ್ಲೂ ಚರ್ಚೆ ಆಗಿತ್ತು.

ಆದ್ರೆ ಅಂತಿಮವಾಗಿ ತುಮಕೂರು ಕ್ಷೇತ್ರ ಜೆಡಿಎಸ್ ಗೆ ಕೊಟ್ಡಿದು ಬೇಸರ ತಂದಿದೆ ಎಂದ್ರು.

ಜೆಡಿಎಸ್ ನಾಯಕರೊಂದಿಗೆ ಮಾತನಾಡಿ ಕ್ಷೇತ್ರ ಬಿಟ್ಟು ಕೊಡುವಂತೆ ಮನವಿ ಮಾಡಲಾಗಿದೆ. ನನಗೆ ಈಗಲೂ ವಿಶ್ವಾಸವಿದೆ ತುಮಕೂರು ಕಾಂಗ್ರೆಸ್ ಗೆ ಬಿಟ್ಟು ಕೊಡ್ತಾರೆ ಎಂಬ ನಂಬಿಕೆ ಇದೆ ಎಂದ್ರು.

ಸೈನಿಕರ ಹೋರಾಟವನ್ನ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬೆಳವಣಿಗೆಯನ್ನ ಮನದಲ್ಲಿರಿಸಿಕೊಳ್ಳಬೇಕಿದೆ.
ದೇಶದ ಒಳಿತಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ತುಮಕೂರಿನಲ್ಲಿ ದೇವೇಗೌಡರು ನಿಲ್ಲುವುದಾದ್ರೆ ಸ್ವಾಗತ.  
ಆದ್ರೆ ಬೇರೆಯವರು ನಿಲ್ಲೊದಾದ್ರೆ ಕಾಂಗ್ರೆಸ್ ಗೆ ಬಿಟ್ಟು ಕೊಡಿ ಅಂತ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಡಿಡಿ ಹಾಸನದಿಂದಲೇ ಸ್ಪರ್ಧಿಸಲಿ ಎಂದ ರೇವಣ್ಣ