Publish Date: Sat, 19 Nov 2022 (20:56 IST)
Updated Date: Sat, 19 Nov 2022 (20:58 IST)
ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜ್ಯದ ಪ್ರಾದೇಶಿಕ ಪಕ್ಷ JDS ಚುನಾವಣೆ ಎದುರಿಸಲು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಕೋಲಾರದಲ್ಲಿ 5 ದಿನಗಳ ಕಾಲ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಥಯಾತ್ರೆಗೆ ಚಾಲನೆ ಸಿಕ್ಕಿದೆ. ಪಂಚರತ್ನ ರಥಯಾತ್ರೆ ಬಳಿಕ ,ಮಾಜಿ ಸಿಎಂ H.D ಕುಮಾರಸ್ವಾಮಿ, ಊರುಕುಂಟೆಯ ಮಿಟ್ಟೂರಿನಲ್ಲಿ ಗ್ರಾಮವಾಸ್ತವ್ಯ ನಡೆಸಿದ್ದಾರೆ. ಗ್ರಾಮ ವಾಸ್ತವ್ಯದ ವೇಳೆ MLC ಭೋಜೇಗೌಡ ಹಾಡನ್ನು ಹಾಡಿದ್ದಾರೆ. ನಂತರ H.D.ಕುಮಾರಸ್ವಾಮಿ, ಅಲ್ಲಿಯೇ ಜರ್ಮನ್ ಟೆಂಟ್ ಹಾಕಿ ರಾತ್ರಿ ಅಲ್ಲಿಯೇ ಮಲಗಿದ್ರು.
ಇಂದು 2ನೇ ದಿನದ JDS ಪಂಚರತ್ನ ರಥಯಾತ್ರೆ ಆರಂಭವಾಗಿದೆ. ಕೋಲಾರದ ಬಂಗಾರಪೇಟೆಯ ತಂಬಿಹಳ್ಳಿಯಲ್ಲಿ ಪಂಚರತ್ನ ಯಾತ್ರೆ ಆರಂಭವಾಯ್ತು. ಬಳಿಕ ನಾಯಕನಹಳ್ಳಿಯಲ್ಲಿ ಬಹಿರಂಗ ಸಭೆ ನಡಸಲಾಯ್ತು. ಇಂದು ಕುಮಾಸ್ವಾಮಿ ಸಂಜೆ 4.30ಕ್ಕೆ ಬೂದಿಕೋಟೆಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಗ್ರಾಮ ವಾಸ್ತವ್ಯಕ್ಕೂ ಮುನ್ನ ಗ್ರಾಮಸ್ಥರ ಜೊತೆ HDK ಸಂವಾದ ನಡೆಸಲಿದ್ದಾರೆ. ನಾಳೆ ಬೆಳಗ್ಗೆ ಮಾಲೂರು ಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆ ನಡೆಯಲಿದೆ.