Webdunia - Bharat's app for daily news and videos

Install App

ತೇಜಸ್ವಿ ಸೂರ್ಯ-ಶಿವಶ್ರೀ ರಿಸೆಪ್ಷನ್‌ಗೆ ಅರಮನೆ ಮೈದಾನ ಸಜ್ಜು: ಡ್ರೈಫ್ರೋಟ್ಸ್‌, ಬೊಕ್ಕೆ ಅವಕಾಶವಿಲ್ಲ ಎಂದ ಸಂಸದ

Sampriya
ಭಾನುವಾರ, 9 ಮಾರ್ಚ್ 2025 (10:50 IST)
Photo Courtesy X
ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿಸೂರ್ಯ ಹಾಗೂ ಕಲಾವಿದೆ ಶಿವಶ್ರೀ ಅವರು ಈಚೆಗೆ ಹಸೆಮಣೆಗೆ ಕಾಲಿಟ್ಟಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಆರತಕ್ಷತೆ ನಡೆಯಲಿದೆ.

ಬೆಂಗಳೂರು ಕನಕಪುರದ ರೆಸಾರ್ಟ್‌ನಲ್ಲಿ ಮಾರ್ಚ್ 5 ಹಾಗೂ 6 ರಂದು ತೇಜಸ್ವಿ-ಶಿವಶ್ರೀ ವಿವಾಹ ಸಮಾರಂಭ ನಡೆದಿತ್ತು. ಇದಕ್ಕೆ ಕುಟುಂಬ ಸದಸ್ಯರು, ಆಪ್ತ ವಲಯದ ಸ್ನೇಹಿತರು, ರಾಜಕೀಯ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿತ್ತು.

ಬೆಂಗಳೂರಿನ ಅರಮನೆ ಮೈದಾನದ ವೃಕ್ಷ, ಗಾಯತ್ರಿ ವಿಹಾರ, ಪ್ಯಾಲೇಸ್‌ ಮೈದಾನದಲ್ಲಿ ರಿಸೆಪ್ಷನ್ ನಡೆಯಲಿದೆ. ಆರತಕ್ಷತೆಗೆ ಅಭಿಮಾನಿಗಳಿಗೆ ತೇಜಸ್ವಿ ಸೂರ್ಯ ಅವರು ಆಹ್ವಾನ ನೀಡಿದ್ದು, ಇದರ ಜೊತೆಗೆ ಒಂದು ವಿಶೇಷ ಮನವಿಯನ್ನೂ ಮಾಡಿದ್ದಾರೆ.

ಭಾರತದಲ್ಲಿ ಪ್ರತಿವರ್ಷ ನಡೆಯುವ 1 ಕೋಟಿಗೂ ಅಧಿಕ ಮದುವೆ ಸಮಾರಂಭಗಳಲ್ಲಿ ಶೇ 85 ರಷ್ಟು ಹೂವುಗಳು & ಬೊಕ್ಕೆಗಳು ಕೇವಲ 24 ಘಂಟೆಗಳಲ್ಲಿ ನಿಷ್ಕ್ರಿಯವಾಗುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ 300000 ಕೆಜಿ ಯಷ್ಟು ಡ್ರೈ ಫ್ರೂಟ್ಸ್‌ ಗಳೂ ಮದುವೆ ನಡೆಯುವ ಸ್ಥಳದಲ್ಲಿಯೇ ಉಳಿದು ಹೋಗುತ್ತವೆ. ಇದರಿಂದ ವಾರ್ಷಿಕ ₹315 ಕೋಟಿ ಮೊತ್ತದ ಹಣ ಅನವಶ್ಯಕವಾಗಿ ವೆಚ್ಚವಾಗುತ್ತದೆ.

ನನ್ನ ಆರತಕ್ಷತೆ ಕಾರ್ಯಕ್ರಮಕ್ಕೆ ಹೂ ಬೊಕ್ಕೆಗಳು, ಡ್ರೈ ಫ್ರೂಟ್ಸ್‌ ಗಳನ್ನು ದಯವಿಟ್ಟು ತರಬೇಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ಆರತಕ್ಷತೆಗೆ ಬರುವ ಹಿರಿಯ ನಾಗರಿಕರು ಮತ್ತು ದಿವ್ಯಾಂಗ ವ್ಯಕ್ತಿಗಳಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments