Webdunia - Bharat's app for daily news and videos

Install App

ಬನ್ನೇರುಘಟ್ಟದಲ್ಲಿ ಸಂಭ್ರಮದ ವಾತಾವರಣ: ಎರಡು ದಿನಗಳ ಅಂತರದಲ್ಲಿ ಆರು ಅತಿಥಿಗಳ ಆಗಮನ

Sampriya
ಭಾನುವಾರ, 9 ಮಾರ್ಚ್ 2025 (10:34 IST)
ಬೆಂಗಳೂರು
Photo Courtesy X
: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಆತಿಥಿಗಳ ಆಗಮನವಾಗಿದೆ.  ಫೆಬ್ರುವರಿಯಲ್ಲಿ ಎರಡು ಹುಲಿಗಳು ಎರಡು ದಿನಗಳ ಅಂತರದಲ್ಲಿ ಆರು ಮರಿಗಳಿಗೆ ಜನ್ಮನೀಡಿವೆ. ಇದೀಗ ಜೈವಿಕ ಉದ್ಯಾನಕ್ಕೆ ಒಟ್ಟು ಆರು ಮರಿಗಳು ಸೇರ್ಪಡೆಯಾಗಿದ್ದು, ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 19ಕ್ಕೆ ಏರಿದಂತಾಗಿದೆ.  

ಫೆಬ್ರವರಿ 14ರಂದು ಆರು ವರ್ಷದ ಹಿಮಾ ಹೆಸರಿನ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅರಣ್ಯ ಎಂಬ ಮತ್ತೊಂದು ಹುಲಿ ಫೆ.16ರಂದು ಎರಡು ಮರಿಗಳಿಗೆ ಜನ್ಮ ನೀಡಿದೆ.

2024ರ ಜೂನ್‌ನಲ್ಲಿ ಹಿಮಾ ತನ್ನ ಮೊದಲ ಮರಿಗಳಿಗೆ ಜನ್ಮ ನೀಡಿತು. ಇದೀಗ ಎರಡನೇ ಬಾರಿಗೆ ಮರಿಗಳನ್ನು ಹಾಕಿದೆ. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕಟಿಸಿದೆ.

ಬನ್ನೇರುಘಟ್ಟ ಉದ್ಯಾನದ ಶ್ಯಾಡೊ ಎಂಬ 16 ವರ್ಷದ ಗಂಡು ಚಿರತೆ ಮಾರ್ಚ್‌ 4ರಂದು ಮೃತಪಟ್ಟಿದೆ.  2011ರಲ್ಲಿ ಬಂಡಿಪುರ ಅರಣ್ಯದಲ್ಲಿ ಈ ಚಿರತೆಯನ್ನು ಸಂರಕ್ಷಿಸಿ ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್‌ ವಸತಿ ಕೇಂದ್ರಕ್ಕೆ ಕಳಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments