ಫರಂಗಿಪೇಟೆ: ವಿಧಾನಸೌಧದಲ್ಲೂ ಸದ್ದು ಮಾಡಿದ್ದ ಅಮ್ಮೆಮ್ಮಾರ್ ಕಿದೆಬೆಟ್ಟು ದಿಗಂತ್ ನಾಪತ್ತೆ ಪ್ರಕರಣವನ್ನೂ ಕೊನೆಗೂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದರೆ.
ಕಳೆದ 12ದಿನದಿಂದ ನಾಪತ್ತೆಯಾಗಿದ್ದ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಿಂದ ಭಾರೀ ಸದ್ದು ಮಾಡಿದ್ದ ದಿಗಂತ್ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿತು. ಆತನ ಪತ್ತೆಗಾಗಿ ಡಿಎಆರ್ ತಂಡದ 30ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್‌ಎಸ್‌ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹುಡುಕಾಟ ನಡೆಸಲಾಗಿತ್ತು.
ನಾಪತ್ತೆ ಪ್ರಕರಣದ ಹಿಂದೆ ಅನೇಕ ಊಹಾಪೋಹಗಳು ಹರಿದಾಡಿತ್ತು. ಇದೀಗ ಕೊನೆಗೂ ದಿಗಂತ್‌ನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.