ಬೆಂಗಳೂರು
: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಆತಿಥಿಗಳ ಆಗಮನವಾಗಿದೆ. ಫೆಬ್ರುವರಿಯಲ್ಲಿ ಎರಡು ಹುಲಿಗಳು ಎರಡು ದಿನಗಳ ಅಂತರದಲ್ಲಿ ಆರು ಮರಿಗಳಿಗೆ ಜನ್ಮನೀಡಿವೆ. ಇದೀಗ ಜೈವಿಕ ಉದ್ಯಾನಕ್ಕೆ ಒಟ್ಟು ಆರು ಮರಿಗಳು ಸೇರ್ಪಡೆಯಾಗಿದ್ದು, ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 19ಕ್ಕೆ ಏರಿದಂತಾಗಿದೆ.
ಫೆಬ್ರವರಿ 14ರಂದು ಆರು ವರ್ಷದ ಹಿಮಾ ಹೆಸರಿನ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅರಣ್ಯ ಎಂಬ ಮತ್ತೊಂದು ಹುಲಿ ಫೆ.16ರಂದು ಎರಡು ಮರಿಗಳಿಗೆ ಜನ್ಮ ನೀಡಿದೆ.
2024ರ ಜೂನ್‌ನಲ್ಲಿ ಹಿಮಾ ತನ್ನ ಮೊದಲ ಮರಿಗಳಿಗೆ ಜನ್ಮ ನೀಡಿತು. ಇದೀಗ ಎರಡನೇ ಬಾರಿಗೆ ಮರಿಗಳನ್ನು ಹಾಕಿದೆ. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕಟಿಸಿದೆ.
ಬನ್ನೇರುಘಟ್ಟ ಉದ್ಯಾನದ ಶ್ಯಾಡೊ ಎಂಬ 16 ವರ್ಷದ ಗಂಡು ಚಿರತೆ ಮಾರ್ಚ್ 4ರಂದು ಮೃತಪಟ್ಟಿದೆ. 2011ರಲ್ಲಿ ಬಂಡಿಪುರ ಅರಣ್ಯದಲ್ಲಿ ಈ ಚಿರತೆಯನ್ನು ಸಂರಕ್ಷಿಸಿ ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್ ವಸತಿ ಕೇಂದ್ರಕ್ಕೆ ಕಳಿಸಲಾಗಿತ್ತು.