Select Your Language

Notifications

webdunia
webdunia
webdunia
webdunia

ದಾವಣಗೆರೆಯಲ್ಲಿ ಹಿಂದೂ ಹೆಸರಿನಲ್ಲಿ ನೆಲೆಸಿದ್ದ ಪಾಕಿಸ್ತಾನ ಕುಟುಂಬ ವಶಕ್ಕೆ

Pakistana Family Arrested, Dhavanagere Pakistana Family Illegal Leaving, Bangalore Pakistana People Arrested

Sampriya

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (16:36 IST)
ಬೆಂಗಳೂರು: ಆನೇಕಲ್​ ತಾಲೂಕಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆಯ ಕುಟುಂಬವನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಇದೀಗ ದಾವಣಗೆರೆಯಲ್ಲಿ ಹಿಂದೂಗಳ ಹೆಸರಿಟ್ಟುಕೊಂಡು ನೆಲೆಸಿದ್ದ ಪಾಕ್ ಪ್ರಜೆಗಳನ್ನು ಬಂಧನ ಮಾಡಲಾಗಿದೆ.

ರಾಜ್ಯದಲ್ಲಿ ಮತ್ತೊಂದು ಪಾಕಿಸ್ತಾನ ಮೂಲದ ಕುಟುಂಬವನ್ನು ಬಂಧಿಸಲಾಗಿದೆ. ಹಿಂದುಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೂಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮೂಲದ ಫಾತಿಮಾ ಅಲ್ಲಿ ಅಲ್ತಾಫ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಉಳಿದಂತೆ, ಮೊಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹನೀಫ್ ಕೂಡ ಪಾಕಿಸ್ತಾನದವನಾಗಿದ್ದು ಹನೀಫ್ ಸೊಸೆ, ಮಗಳು, ಅಳಿಯನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದಾನೆ. ಸಿದ್ದಿಕಿ ಮೊಹಮ್ಮದ್ ಯಾಸಿನ್ (ಪುತ್ರ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳು.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಹೇಳಿದ್ದು ಕೇಳಿದ್ದರೆ ಸಿದ್ದರಾಮಯ್ಯಗೆ ಹೀಗಾಗ್ತಿರಲಿಲ್ಲ: ಬಿ ವೈ ವಿಜಯೇಂದ್ರ