Select Your Language

Notifications

webdunia
webdunia
webdunia
webdunia

ಗಾಂಧೀಜಿ ಕನಸು ನನಸು ಮಾಡಲು ಮೋದಿಜಿ ಶ್ರಮ ವಹಿಸುತ್ತಿದ್ದಾರೆ: ಬಿ ವೈ ವಿಜಯೇಂದ್ರ

B Y Vijayendra BJP

Krishnaveni K

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (15:42 IST)
ಬೆಂಗಳೂರು: ಈ ದೇಶಕ್ಕೆ ಸ್ವಾತಂತ್ರ್ಯ ಬರುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಅವರ ಅವಿರತ ಹೋರಾಟ, ಲಕ್ಷಾಂತರ ಭಾರತೀಯರಿಗೆ ಪ್ರೇರಣಾ ಶಕ್ತಿಯಾಗಿ ಅವರು ಕೆಲಸ ಮಾಡಿದ್ದರು. ರಾಮರಾಜ್ಯದ ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸಾಗಿಸಲು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಕಳೆದ 10 ವರ್ಷಗಳಿಂದ ದೇಶವನ್ನು ದೂರದೃಷ್ಟಿಯಿಂದ ಮುನ್ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಈ ಗಣ್ಯರಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಇಂದು ದೇಶ ಕಂಡ ಶ್ರೇಷ್ಠ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ ಅವರ ಗಾಂಧಿ ಜಯಂತಿ ಮತ್ತು ದೇಶದ ಎರಡನೇ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಎಂದ ಅವರು, ಗ್ರಾಮಗಳ ಉದ್ಧಾರದಿಂದ ಮಾತ್ರ ದೇಶ ಉದ್ಧಾರ ಆಗುತ್ತದೆ ಎಂಬುದು ಮಹಾತ್ಮ ಗಾಂಧೀಜಿ ಅವರ ಚಿಂತನೆ. ಅವರ ಇಚ್ಛೆಯನ್ನು ಈಡೇರಿಸಲು ಇವತ್ತು ಮೋದಿಜೀ ಅವರು ಶ್ರಮಿಸುತ್ತಿದ್ದಾರೆ. ದೇಶದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕು ಎಂಬ ಸಂಕಲ್ಪದೊಂದಿಗೆ ಅವರು ಪ್ರಧಾನ ಸೇವಕರಾಗಿ ಹಗಲು, ರಾತ್ರಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ, ಮೋದಿಜೀ ಜನ್ಮದಿನವಾದ ಸೆ. 17ರಿಂದ ಅ.2ರ ಮಹಾತ್ಮ ಗಾಂಧಿ-ಶಾಸ್ತ್ರಿಯವರ ಜಯಂತಿ ವರೆಗೆ ಸೇವಾ ಪಾಕ್ಷಿಕವನ್ನು ಆಚರಿಸುತ್ತಿದೆ. ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನವನ್ನೂ ಪರಿಗಣಿಸಿ ರಕ್ತದಾನ ಶಿಬಿರ, ಸಸಿ ನೆಡುವುದು ಸೇರಿ ವಿವಿಧ ಸೇವಾ ಕಾರ್ಯಗಳಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ನಡೆಸಲಾಗಿದೆ ಎಂದು ವಿವರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ ಬಟ್ಟೆಗೆ ತಗುಲಿದ ಬೆಂಕಿಯ ಬಿಸಿ