Select Your Language

Notifications

webdunia
webdunia
webdunia
webdunia

SCP/TSP ಕಾಯ್ದೆ ಮೊದಲಿಗೆ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (09:01 IST)
ಬೆಂಗಳೂರು: ಈ ಬಾರಿ ಅರ್ಥಪೂರ್ಣವಾದ- ವಾಲ್ಮೀಕಿ ಜಯಂತಿ ಆಚರಣೆ ನಡೆಸೋಣ. ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ನುಡಿದರು. 
 
ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ "2024ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತ ಪೂರ್ವಭಾವಿ" ಸಭೆಯಲ್ಲಿ ಮಾತನಾಡಿದರು.  
 
SCP/TSP ಕಾಯ್ದೆ ಮೊದಲಿಗೆ ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ.  ಗುತ್ತಿಗೆಯಲ್ಲಿ SC-ST ಗೆ ಮೀಸಲಾತಿ ಮೊದಲಿಗೆ ತಂದಿದ್ದು ಇಡೀ ದೇಶದಲ್ಲಿ ನಾವು ಮಾತ್ರ.‌
ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ ಎಂದು ಕಾಂಗ್ರೆಸ್ ಸರ್ಕಾರದ ಹಲವು ಪ್ರಥಮಗಳನ್ನು ವಿವರಿಸಿದರು. 
 
2013-18ರ ವರೆಗೆ ನಾವು scp/STP ಅನುದಾನ ನಿರಂತರವಾಗಿ ನಾವು ಹೆಚ್ಚಿಸಿದೆವು. ನಂತರ ಬಂದ ಸರ್ಕಾರ ಕೊಡಲೇ ಇಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದು ಅನುದಾನ ಹೆಚ್ಚಿಸಿದೆವು. ಇದು ನಮ್ಮ ಸರ್ಕಾರದ ಬದ್ದತೆ ಎಂದರು. 
 
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಶಾಸಕರುಗಳಾದ ರಘುಮೂರ್ತಿ, ಡಾ.ಶ್ರೀನಿವಾಸ್, ಬಸವನಗೌಡ ದದ್ದಲ್, ಬಿ.ಎಂ.ನಾಗರಾಜು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.‌
 

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ಜಯಂತಿ ರಾಷ್ಟ್ರೀಯ ಹಬ್ಬವಾಗಿದ್ದು ಯಾವಾಗ, ಮಹತ್ವವೇನು