Select Your Language

Notifications

webdunia
webdunia
webdunia
webdunia

ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡು ಸಿದ್ದರಾಮಯ್ಯ ಶೂ ಬಿಚ್ಚಿದ ಕಾರ್ಯಕರ್ತ (ವಿಡಿಯೋ)

Siddaramaiah shoe

Krishnaveni K

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (13:16 IST)
Photo Credit: X
ಬೆಂಗಳೂರು: ಗಾಂಧಿ ಜಯಂತಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಉತ್ಸವದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಇಂದು ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯ ಶೂ ಬಿಚ್ಚಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಓರ್ವ ಕಾರ್ಯಕರ್ತ ಸಿದ್ದರಾಮಯ್ಯ ಶೂ ಲೇಸ್ ಬಿಚ್ಚಿದ್ದಾನೆ. ಈ ವೇಳೆ ರಾಷ್ಟ್ರಧ್ವಜ ಸಿದ್ದರಾಮಯ್ಯ ಕಾಲಿಗೆ ತಾಕುತ್ತಿತ್ತು. ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ನಿಯಮಗಳು, ಗೌರವವಿದೆ. ಆದರೆ ಶೂ ಬಿಚ್ಚುವಾಗ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಅದನ್ನು ಶೂಗೆ ತಾಕಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಸೇರಿದಂತೆ ಸುತ್ತಲೂ ಇದ್ದ ಕಾಂಗ್ರೆಸ್ ನಾಯಕರೆಲ್ಲರೂ ಇದಕ್ಕೆ ಮೂಕ ಸಾಕ್ಷಿಯಾಗಿದ್ದರು. ಯಾರೊಬ್ಬರೂ ಈ ಪ್ರಮಾದವನ್ನು ಅರಿಯಲಿಲ್ಲ. ಆದರೆ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇದಕ್ಕೆ ಮೊದಲು ಇಂದು ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆ ಸಿದ್ದರಾಮಯ್ಯ ದೀಪ ಬೆಳಗುವಾಗ ಶಲ್ಯಕ್ಕೆ ಬೆಂಕಿ ಹತ್ತಿಕೊಂಡು ಪ್ರಮಾದವಾಗಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಡೆದರು. ಇದರ ನಡುವೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವೈರಲ್ ವಿಡಿಯೋ ಈಗ ಆಕ್ರೋಶಕ್ಕೆ ಕಾರಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಿತ್ತೂರು ಉತ್ಸವದಲ್ಲಿ ದೀಪ ಬೆಳಗುವಾದ ಸಿದ್ದರಾಮಯ್ಯ ಶಲ್ಯಕ್ಕೆ ಬೆಂಕಿ: ಸಂಕಷ್ಟದ ಸೂಚನೆಯಾ