Select Your Language

Notifications

webdunia
webdunia
webdunia
webdunia

ಚಿಕ್ಕೋಡಿ: ಕಾರಿನಲ್ಲಿ ಭಸ್ಮವಾದ ಉದ್ಯಮಿ

ಚಿಕ್ಕೋಡಿ: ಕಾರಿನಲ್ಲಿ ಭಸ್ಮವಾದ ಉದ್ಯಮಿ

Sampriya

ಚಿಕ್ಕೋಡಿ , ಬುಧವಾರ, 2 ಅಕ್ಟೋಬರ್ 2024 (15:43 IST)
Photo Courtesy X
ಚಿಕ್ಕೋಡಿ (ಬೆಳಗಾವಿ): ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದ ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ಪಕ್ಕ ಕಾರಿನಲ್ಲಿ ಸುಟ್ಟು ಭಸ್ಮವಾದ ರೀತಿಯಲ್ಲಿ ಉದ್ಯಮಿಯ ಮೃತದೇಹ ಪತ್ತೆಯಾಗಿದೆ.

ಮೃತರನ್ನು ಇಲ್ಲಿನ ಮುಲ್ಲಾ ಪ್ಲಾಟ್‌ ನಿವಾಸಿ, ಗ್ರಾನೈಟ್‌ ಉದ್ಯಮಿ ಫೈರೋಜ್ ಬಡಗಾಂವಿ (40) ಎಂದು ಗುರತಿಸಲಾಗಿದೆ.  ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಚಾಲಕನ ಸೀಟಿನಲ್ಲಿ ಕುಳಿತಿದ್ದ ಫೈರೋಜ್‌ ಕೂಡ ಬೆಂದುಹೋಗಿದ್ದಾರೆ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಹಗಲು ರಾತ್ರಿ ನಿರಂತರವಾಗಿ ವಾಹನ ಓಡಾಟ ನಡೆಸುವ ಸ್ಥಳದಲ್ಲಿ ಬೆಂಕಿಯನ್ನು ಯಾರೂ ಏಕೆ ಗಮನಿಸಿಲ್ಲ ಎಂಬುದು ಇದೀಗ ಸಂದೇಹಕ್ಕೆ ಕಾರಣವಾಗಿದೆ. ಬುಧವಾರ ಮಧ್ಯಾಹ್ನ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಕೂಡ ಭೇಟಿ ನೀಡಿ ಪರಿಶೀಲಿಸಿದರು.

ಮೇಲ್ನೋಟಕ್ಕೆ ಅಪಘಾತವಾಗಿ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತಿದೆ. ಆದರೂ ಸಾವು ಅನುಮಾನಾಸ್ಪದವಾಗಿದೆ. ಮೃತನ ಕುಟುಂಬದವರ ದೂರು ಆಧರಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧೀಜಿ ಕನಸು ನನಸು ಮಾಡಲು ಮೋದಿಜಿ ಶ್ರಮ ವಹಿಸುತ್ತಿದ್ದಾರೆ: ಬಿ ವೈ ವಿಜಯೇಂದ್ರ