ಪೇಜಾವರ ಶ್ರೀಗಳು ನಾಡು ಕಂಡಿರುವ ಶ್ರೇಷ್ಠ ಯತಿಗಳು- ಮಲ್ಲಿಕಾರ್ಜುನ ಖರ್ಗೆ ಸಂತಾಪ

ಭಾನುವಾರ, 29 ಡಿಸೆಂಬರ್ 2019 (10:31 IST)
ಬೆಂಗಳೂರು : ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ವಿಧಿವಶರಾಗಿದ್ದು, ಶ್ರೀಗಳ ಅಗಲಿಕೆಗೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.ಪೇಜಾವರ ಶ್ರೀಗಳು ನಾಡು ಕಂಡಿರುವ ಶ್ರೇಷ್ಠ ಯತಿಗಳು. ಆಧ್ಯಾತ್ಮ ಲೋಕದಲ್ಲಿ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಅವರ ಆರಾಧ್ಯೆ ದೈವ ಕೃಷ್ಣ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು  ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.


ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೇಜಾವರ ಶ್ರೀಗಳಂತಹ ಅಪರೂಪದ ಯತಿವರ್ಯರಿರುವುದು ಕಷ್ಟ- ಸಿಎಂ ಸಂತಾಪ