Select Your Language

Notifications

webdunia
webdunia
webdunia
webdunia

ಪ್ರಿಯತಮೆ ಜೊತೆ ಸೇರಿ ತಾಯಿಯನ್ನೇ ಕೊಂದ ಪಾಗಲ್ ಮಗ

ಪ್ರಿಯತಮೆ ಜೊತೆ ಸೇರಿ ತಾಯಿಯನ್ನೇ ಕೊಂದ ಪಾಗಲ್ ಮಗ
ಲಕ್ನೋ , ಸೋಮವಾರ, 9 ಮಾರ್ಚ್ 2020 (17:50 IST)
ಪ್ರೀತಿಯ ಗುಂಗಲ್ಲಿ ಮುಳುಗಿದ್ದ ಮನುಷ್ಯತ್ವ ಮರೆತ ಮಗನೊಬ್ಬ ಪ್ರಿಯತಮೆಯ ಜೊತೆಗೆ ಸೇರಿಕೊಂಡು ತನ್ನ ತಾಯಿಯನ್ನೇ ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಲಕ್ಷ್ಮೀದೇವಿ ಕೊಲೆಯಾದ ತಾಯಿಯಾಗಿದ್ದರೆ, ಮಗನಾದ ಶಿವಂ ಹಾಗೂ ಆತನ ಪ್ರಿಯತಮೆ ಕೊಲೆ ಮಾಡಿದವರಾಗಿದ್ದಾರೆ.
ಪ್ರೀತಿಗೆ ತಾಯಿ ಅಡ್ಡಿಪಡಿಸುತ್ತಿದ್ದಳು. ಹೀಗಾಗಿ ಶಿವಂ ತನ್ನ ಪ್ರಿಯತಮೆಯನ್ನು ಕರೆದುಕೊಂಡು ಓಡಿಹೋಗುವ ಪ್ಲ್ಯಾನ್ ನಲ್ಲಿದ್ದ. ಇದಕ್ಕಾಗಿ ದುಡ್ಡು ಕೊಡದ ತಾಯಿಯನ್ನೇ  ಪ್ರೇಯಸಿಯ ಜೊತೆ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದನು.

ಬಳಿಕ ಪೊಲೀಸ್ ಠಾಣೆಗೆ ಬಂದು ಏನೇನೊ ಕಥೆ ಕಟ್ಟಿದ್ದನು. ಕೇಸ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಸತ್ಯ ಗೊತ್ತಾಗಲು ಬಹಳ ಸಮಯ ಬೇಕಾಗಲಿಲ್ಲ. ಶಿವಂ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಅನ್ನೋದನ್ನು ಕನ್ಫರ್ಮ್ ಮಾಡಿಕೊಂಡ ಮೇಲೆ ಆತನ ಪ್ರೇಯಸಿಯನ್ನೂ ಪೊಲೀಸರು ಬಂಧನ ಮಾಡಿದ್ದಾರೆ.
ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಯ ಕನ್ಯತ್ವ ಪರೀಕ್ಷೆ ಮಾಡಿದ ಅತ್ತೆ ; ಸೀರೆ ಬಿಚ್ಚಿ ಕಾಮದಾಹ ತೀರಿಸಿಕೊಂಡ ಭಾವ