Publish Date: Wed, 30 Aug 2017 (13:32 IST)
Updated Date: Wed, 30 Aug 2017 (13:34 IST)
ಆರೆಸ್ಸೆಸ್‌ನ ಕೇಶವಕೃಪಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಸಚಿವ ಆರ್.ಅಶೋಕ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವ ಅಶೋಕ್ ವಿಪಕ್ಷಗಳ ನಾಯಕರೊಂದಿಗೆ ಆತ್ಮಿಯವಾಗಿ ಇರುವುದು ಸರಿಯಲ್ಲ. ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೆಸ್ಸೆಸ್ ನಾಯಕರು ಗರಂ ಆಗಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದೆ ಕೂಡಾ ಮಾಜಿ ಸಚಿವ ಅಶೋಕ್ ನಡೆಯನ್ನು ಪ್ರಸ್ತಾಪಿಸಲಾಗಿದೆ. ಅಶೋಕ್, ಇತರ ಪಕ್ಷಗಳ ನಾಯಕರೊಂದಿಗೆ ಸ್ನೇಹದಿಂದ ಇರುವುದರಿಂದ ಅವರ ವಿರುದ್ಧ ಆರೋಪ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.