Publish Date: Tue, 29 Aug 2017 (12:31 IST)
Updated Date: Tue, 29 Aug 2017 (12:38 IST)
ದಲಿತರೆಂದರೆ ಯಾರು..? ಅವರು ಮನೆಗೆ ಕರೆಸಿದ್ದವರು ಮಾತ್ರನಾ..? ದಿನವೂ ದಲಿತರ ಜೊತೆ ಊಟ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪನವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಿನ್ನೆ 33 ದಲಿತ ಕುಟುಂಬಗಳನ್ನ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕರೆಸಿಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಅವರಿಗೆ ಔತಣಕೂಟದ ವ್ಯವಸ್ಥೆ ಮಾಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಯಡಿಯೂರಪ್ಪ, ಕಾಂಗ್ರೆಸ್ಸಿಗರು ದಲಿತರ ಜೊತೆ ಸಹ ಭೋಜನ ಮಾಡಲಿ ಎಂದು ಸವಾಲು ಹಾಕಿದ್ದರು. ಯಡಿಯೂರಪ್ಪ ಸವಾಲಿಗೆ ಸಿಎಂ ಸಿದ್ದರಾಮಯ್ಯ ಇವತ್ತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಡೆ ದಲಿತರ ಮನೆಗೆ ಅಭಿಯಾನ ಕೈಗೊಂಡಿದ್ದ ಸಂದರ್ಭ ಮಾಜಿ ಸಿಎಂ ಯಡಿಯೂರಪ್ಪ ದಲಿತರ ಮನೆಗಳಿಗೆ ತೆರಳಿ ಊಟ ಮಾಡಿದ್ದರು. ದಲಿತರ ಮನೆಯಲ್ಲಿ ಹೋಟೆಲ್`ನಿಂದ ತರಿಸಿದ ಊಟ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿತ್ತು. ಆ ಬಳಿಕ ಯಡಿಯೂರಪ್ಪ ತಮಗೆ ಆತಿಥ್ಯ ನೀಡಿದ ದಲಿತ ಕುಟುಂಬಗಳನ್ನ ಮನೆಗೆ ಕರೆಸಿಕೊಂಡು ಊಟದ ವ್ಯವಸ್ಥೆ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ