ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗ್ತಾ ಇದೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ದಿನಾಂಕ ಕೂಡ ನಿಗದಿ ಆಗಲಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಬೆಂಗಳೂರಿನಲ್ಲಿ ಆಪರೇಷನ್ ಬುಲ್ಡೋಜರ್ ಸುಳಿವನ್ನು ನೀಡಿದ್ದು ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದೆ.
ಚುನಾವಣಾ ಸಂದರ್ಭದಲ್ಲಿ ಜನವಿರೋಧಿ ಅಥವಾ ಸರ್ಕಾರಕ್ಕೆ ಮುಜುಗರ ಆಗ್ತಾಕ್ಕಂತ ಕೆಲಸಗಳನ್ನು ಮಾಡಲು ಮುಂದಾಗಲ್ಲ. ಏನೇ ನಿಯಮಬಾಹಿರ ಆಗಿದ್ರು ಕ್ರಮಕ್ಕೆ ಮುಂದಾಗಲ್ಲ. ಆದರೆ ಈ ನಡುವೆ ಒತ್ತುವರಿ ತೆರವಿಗೆ ಸರ್ಕಾರ ಅನುಮತಿ ನೀಡುವುದು ಅನುಮಾನವಾಗಿದೆ.
ಆದರೂ ಫೆ.10ರ ಒಳಗಡೆ ಒತ್ತುವರಿದಾರರಿಗೆ ನೋಟಿಸ್ ನೀಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಹಶೀಲ್ದಾರ್ಗೆ ಸೂಚಿಸಿದ್ದಾರೆ. ಜೊತೆಗೆ ಮಾರ್ಚ್ ತಿಂಗಳ ಒಳಗಡೆ ತೆರವು ಕಾರ್ಯಾಚರಣೆ ಮುಗಿಸುವ ಗುರಿಯನ್ನು ಕೂಡ ನೀಡಲಾಗಿದೆ.