Publish Date: Tue, 20 Dec 2022 (20:38 IST)
Updated Date: Tue, 20 Dec 2022 (20:43 IST)
ಬೊಮ್ಮಾಯಿ ಸರ್ಕಾರ ನ್ಯಾಯಸಮ್ಮತವಾದ ಸರ್ಕಾರ ಅಲ್ಲ, ಜನರ ದೃಷ್ಟಿಯಲ್ಲಿ ಎಂದೋ ಬಿದ್ದು ಹೋಗಿದೆ ಅಂತಾ ಬೆಳಗಾವಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೆವಾಲಾ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಸಲ್ಲದ ಅಸ್ತ್ರವನ್ನ ಬಿಜೆಪಿಯವರು ಉಪಯೋಗಿಸುತ್ತಾರೆ. ಎಷ್ಟು ದಿನ ಅಂತ ಶಿವಕುಮಾರ್ ಮೇಲೆ ರೇಡ್ ಮಾಡುವಿರಿ. ಸಿಬಿಐ, ಇಡಿ ಕಚೇರಿಯನ್ನು ಶಿವಕುಮಾರ್ ಮನೆಯಲ್ಲೇ ತೆರೆಯಿರಿ, ಪ್ರತಿದಿನ ಬೆಳಿಗ್ಗೆ ಎದ್ದು ರೇಡ್ ಮಾಡಿ. ಇಷ್ಟು ದಿನ ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿದ್ದೀರಿ, ಆದರೆ ಇದುವರೆಗೆ ಯಾವುದೇ ಸಾಕ್ಷ್ಯ ನಿಮಗೆ ಸಿಕ್ಕಲ್ಲ. ಇದು ಹತಾಶ ಮತ್ತು ಸೋತ ಮಾನಸಿಕತೆಯನ್ನ ಸೂಚಿಸುತ್ತದೆ. ಇದರಿಂದ ಕಾಂಗ್ರೆಸ್ ನಾಯರಾಗಲಿ, ಕಾರ್ಯಕರ್ತರಾಗಲಿ ಹೆದರುವುದಿಲ್ಲ. ದೆಹಲಿಯಿಂದ ಕರ್ನಾಟಕದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಜೊತೆ ಇದ್ದಾರೆ ಡಿ.ಕೆ.ಶಿವಕುಮಾರ್ ಹೆದರುವ ವ್ಯಕ್ತಿ ಅಲ್ಲ ಎಂದು ಬಿಜೆಪಿ ವಿರುದ್ದ ಸುರ್ಜೆವಾಲಾ ಆಕ್ರೋಶ ಹೊರಹಾಕಿದ್ದಾರೆ.