ಮದ್ಯ ಸೇವಿಸಲು ನೂರು ರೂ. ಕೇಳಿದ್ದಕ್ಕೆ ಕೊಲೆ!

Webdunia
ಸೋಮವಾರ, 20 ಡಿಸೆಂಬರ್ 2021 (08:13 IST)
ಬೆಂಗಳೂರು : ಮದ್ಯಪಾನ ಮಾಡಲು ನೂರು ರೂ. ಹಣ ಕೇಳಿದ್ದ ವ್ಯಕ್ತಿಯೊಬ್ಬನಿಗೆ ತೂಕ ಮಾಡುವ 1 ಕೆ. ಜಿ. ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಮೂರು ತಿಂಗಳ ಬಳಿಕ ಬಂಧಿಸಿದ್ದಾರೆ.

ಕೇರಳ ಮೂಲದ ಸಂಶೀರ್ (28) ಬಂಧಿತ ಆರೋಪಿ. ಪ್ರತೀಕ್ ಎಸ್. ಯಾದವ್ (31) ಕೊಲೆಯಾಗಿದ್ದ ಯುವಕ.

ಅಂಗಡಿಯಲ್ಲಿದ್ದ ಸಂಶೀರ್ಗೆ ಮತ್ತೆ ಮದ್ಯಪಾನ ಮಾಡಲು 100 ರೂ. ಕೊಡುವಂತೆ ಪೀಡಿಸಿದ್ದ. ಆಗ ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ.

ಇದರಿಂದ ಕೋಪಗೊಂಡ ಸಂಶೀರ್ ತೂಕ ಮಾಡುವ 1 ಕೆ. ಜಿ. ಕಲ್ಲಿನಿಂದ ಆತನ ತಲೆಗೆ, ಹಣೆಗೆ ಹೊಡೆದಿದ್ದ. ಗಾಯಗೊಂಡು ತೀವ್ರ ರಕ್ತಸ್ರಾವವಾದಾಗ ಮಾಲೀಕ ಸುರೇಶ್ ಇಬ್ಬರನ್ನು ಸಮಾಧಾನಪಡಿಸಿ ಪ್ರತೀಕ್ ಗಾಯಕ್ಕೆ ಬಟ್ಟೆ ಸುತ್ತಿದ್ದರು.

ನಂತರ ಮಾಲೀಕ ಸುರೇಶ್ ತಮ್ಮ ಸಹೋದರನನ್ನು ಕರೆಸಿ ಪ್ರತೀಕ್ನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೃತದೇಹವನ್ನು ಯಲಹಂಕ ಸಂಚಾರಿ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ಪ್ರತೀಕ್ನ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂಬ ವೈದ್ಯಕೀಯ ವರದಿ ಪೊಲೀಸರ ಕೈ ಸೇರಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೃತನನ್ನು ಆಸ್ಪತ್ರೆಗೆ ದಾಖಲಿಸಿದ ಸುಬ್ರಮಣಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಅಂದು ನಡೆದ ಘಟನೆಯನ್ನು ವಿವರಿಸಿದ್ದರು.

ಬಳಿಕ ಅಂಗಡಿ ಮಾಲೀಕ ಸುರೇಶ್ನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಸಂಶೀರ್ ಹಾಗೂ ಪ್ರತೀಕ್ ನಡುವೆ ಜಗಳವಾಗಿ ಹಲ್ಲೆ ಮಾಡಿರುವ ಸಂಗತಿ ಪೊಲೀಸರಿಗೆ ತಿಳಿದು ಬಂದಿದೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಸಂಶೀರ್ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಪಿತೃವಿಯೋಗ: ಬೀದರ್‌ನ ಧೀಮಂತ ರಾಜಕಾರಣಿ ಭೀಮಣ್ಣ ಖಂಡ್ರೆ ಇನ್ನಿಲ್ಲ

Nipah Virus: ತಿಳಿದುಕೊಳ್ಳಲೇ ಬೇಕಾದ ಅಂಶಗಳು ಇಲ್ಲಿದೆ

ರಾಷ್ಟ್ರೀಯ ಪ್ಯಾರಾಲಿಂಪಿಕ್ ಪವರ್‌ಲಿಫ್ಟಿಂಗ್: ಪುಷ್ಕರ್ ಸಿಂಗ್ ಧಾಮಿ ಚಾಲನೆ

ಲಕ್ಕುಂಡಿ ನಿಧಿ ಪ್ರಕರಣ: ಗದಗದಲ್ಲಿ ಮಹತ್ವದ ಬೆಳವಣಿಗೆ

ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಬೆಂಗಳೂರು ಟು ಕೊಟ್ಟಾಯಂ ವಿಶೇಷ ರೈಲು

ಮುಂದಿನ ಸುದ್ದಿ
Show comments