Publish Date: Wed, 08 Dec 2021 (19:49 IST)
Updated Date: Wed, 08 Dec 2021 (19:52 IST)
ಪತಿ-ಪತ್ನಿ ನಡುವೆ ಜಗಳ ಆಗೋದು ಕಾಮನ್. ಕೆಲವೊಮ್ಮೆ ಜಗಳಗಳು ವಿಕೋಪಕ್ಕೆ ತಿರುಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಒಬ್ಬ ಹೆಂಡ್ತಿ ಜೊತೆ ಜೀವನ ನಡೆಸೋದು ಕಷ್ಟ ಅಂತ ಇಬ್ಬರನ್ನು ಮದುವೆ ಆಗಿರುವ ವ್ಯಕ್ತಿಯ ಮುಂದೆ ಹೇಳುತ್ತಿರುತ್ತಾರೆ. ಎರಡು ಮದುವೆಯಾದ ಗಂಡನ ವಿಚಿತ್ರ ಸುದ್ದಿಯೊಂದು ವರದಿಯಾಗಿದೆಎರಡು ಮದುವೆ ಆದ ವ್ಯಕ್ತಿಯ ಗೋಳು ಕಂಡವರಿಗೆ ಗೊತ್ತು. ಯಾವ ಪತ್ನಿಯನ್ನ ಸಮಾಧಾನ ಮಾಡಬೇಕು ಅನ್ನೋ ಗೊಂದಲದಲ್ಲಿಯೇ ಜೀವನ ಕಳೆಯುತ್ತಾರೆ. ಇಬ್ಬರು ಪತ್ನಿಯರು ಒಂದೇ ಮನೆಯಲ್ಲಿದ್ದರಂತೂ ಮನಸ್ತಾಪ ಹೆಚ್ಚು ಇರುತ್ತೆ ಅನ್ನೋ ಕಾರಣಕ್ಕೆ ಎರಡು ಮದುವೆಯಾದ್ರೂ, ಬೇರೆ ಬೇರೆ ಮನೆ ಮಾಡಿರುತ್ತಾರೆ. ಎರಡು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸುತ್ತಿರುವವರು ನಮ್ಮ ನಿಮ್ಮ ಮಧ್ಯೆ ಇದ್ದಾರೆ,ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಪ್ರಕರಣವೊಂದು ವರದಿಯಾಗಿದೆ. ಇಲ್ಲಿ ಇಬ್ಬರು ಪತ್ನಿಯರು ಪತಿಯನ್ನು ವಾರಕ್ಕೆ ಮೂರು ದಿನದಂತೆ ಹಂಚಿಕೊಂಡಿದ್ದಾರೆ. ಈ ಸುದ್ದಿ ಪ್ರಕಟವಾಗಿರುವ ಪೇಪರ್ ತುಣುಕಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.ರಾಂಚಿಯ ನಿವಾಸಿಯಾಗಿರುವ ರಾಜೇಶ್ ಎಂಬಾತನಿಗೆ ಇಬ್ಬರು ಮಡದಿಯರು, ಇಬ್ಬರು ಪತ್ನಿಯರಿಗೂ ಪ್ರತ್ಯೇಕ ಮನೆ ಮಾಡಿರುವ ರಾಜೇಶ್, ಒಬ್ಬರ ಬಳಿಯೇ ಹೆಚ್ಚು ಸಮಯ ಕಳೆಯುತ್ತಿದ್ದನು.ಪತಿಯ ನಡವಳಿಕೆಯಿಂದ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಕಳೆದ ಐದು ದಿನಗಳಿಂದ ಗಂಡ ಮನೆಗೆ ಬಂದಿಲ್ಲ ಎಂದು ದೂರು ದಾಖಲಿಸಿದ್ದಾರೆ. ಪೊಲೀಸರು ಪತಿ ರಾಜೇಶ್ ಮತ್ತು ಆತನ ಮತ್ತೋರ್ವ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಪತ್ನಿಯರಿಬ್ಬರು ವಾರಕ್ಕೆ ಮೂರು- ಮೂರು ದಿನದಂತೆ ಪತಿಯನ್ನು ಹಂಚಿಕೊಂಡಿದ್ದಾರೆ. ಉಳಿದ ಒಂದು ದಿನವನ್ನು ಆತನಿಗೆ ರಜೆ ರೂಪದಲ್ಲಿ ನೀಡಿದ್ದಾರೆ, ಆ ಒಂದು ದಿನ ರಾಜೇಶ್ ತನ್ನ ಇಷ್ಟದಂತೆ ಇರಬಹುದು. ಸದ್ಯ ಸುದ್ದಿ ವೈರಲ್ ಆಗಿದ್ದು, ಹೀಗೂ ರಜೆ ಸಿಗುತ್ತಾ ಅಂತ ಜನರು ನಗುತ್ತಿದ್ದಾರೆ.