Select Your Language

Notifications

webdunia
webdunia
webdunia
webdunia

ಕೆ. ಪಿ. ಎಸ್. ಸಿ. ಅಭ್ಯರ್ಥಿಗಳ ಪರದಾಟ

ಕೆ. ಪಿ. ಎಸ್. ಸಿ. ಅಭ್ಯರ್ಥಿಗಳ ಪರದಾಟ
ಬೆಂಗಳೂರು , ಬುಧವಾರ, 8 ಡಿಸೆಂಬರ್ 2021 (18:08 IST)
ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದೆ. ಓಮಿಕ್ರಾನ್ ಆತಂಕದ ನಡುವೆ ನೂರಾರು ಮೈಲಿ ದೂರದಲ್ಲಿ ಪರೀಕ್ಷೆ ಬರೆಯಬೇಕಾದ ಸಂದಿಗ್ಧತೆ ಕೆಪಿಎಸ್‍ಸಿ ಆಕಾಂಕ್ಷಿಗಳಿಗೆ ಎದುರಾಗಿದೆ.ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಸುಮಾರು 60 ಸಾವಿರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
 
ಇದೇ ತಿಂಗಳ 13 ಮತ್ತು 14ರಂದು ಎರಡು ದಿನ ನಡೆಯುವ ಕೆಪಿಎಸ್‍ಸಿ ಪರೀಕ್ಷೆಯನ್ನು ಬರೆಯಲು ತಮ್ಮ ಊರಿಂದ 500-600 ಕಿಲೋ ಮೀಟರ್ ದೂರದ ಊರಿಗೆ ಹೋಗಿ ಪರೀಕ್ಷೆ ಬರೆಯಬೇಕು. ಬಹುತೇಕ ಅಭ್ಯರ್ಥಿಗಳಿಗೆ ಪರವೂರಿನಲ್ಲಿ ಪರೀಕ್ಷಾ ಕೇಂದ್ರಗಳು ಸಿಕ್ಕಿವೆ.
 
ಕೊರೋನಾ ಹೆಚ್ಚಾಗಿರುವ ಸಮಯದಲ್ಲಿ ಈ ರೀತಿ ೀರ್ಘ ಪ್ರಯಾಣ ಮಾಡುವುದು ಎಷ್ಟು ಸರಿ ಎಂದು ಅಭ್ಯರ್ಥಿಗಳು ಹೇಳುತ್ತಾರೆ. ಅಲ್ಲದೆ ಬಹಳ ಹೊತ್ತು ಪ್ರಯಾಣ ಮಾಡಿ ಬಂದು ಎರಡು ದಿನ ಉಳಿದುಕೊಂಡು ಪರೀಕ್ಷೆ ಬರೆಯಬೇಕು.ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಕಳೆದ ಸೋಮವಾರವಷ್ಟೆ.ಬೆಂಗಳೂರಿನ ಯಲಹಂಕದಲ್ಲಿ ಪರೀಕ್ಷಾ ಕೇಂದ್ರವಿದೆ. 5 ಗಂಟೆ ಪ್ರಯಾಣಿಸಿ ಬೆಂಗಳೂರಿಗೆ ಬರಬೇಕು ಎಂದು ಹೇಳುತ್ತಾರೆ. ಆದರೆ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಗಟ್ಟಲು ಈ ರೀತಿ ಮಾಡಲಾಗಿದೆ ಎಂದು ಕೆಪಿಎಸ್‍ಸಿ ಅಕಾರಿಗಳು ಹೇಳುತ್ತಿದ್ದಾರೆ.
 
ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 2019ರಲ್ಲಿ ಕೆಪಿಎಸ್ ಸಿ ಪರೀಕ್ಷೆ ನಡೆದಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ 870 ಎಂಜಿನಿಯರಿಂಗ್ ಹುದ್ದೆಗಳು, 570 ಸಹಾಯಕ ಎಂಜಿನಿಯರ್ ಮತ್ತು 300 ಜ್ಯೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಕರೆದು ಜೂನ್ 2019ರಲ್ಲಿ ಪರೀಕ್ಷೆ ನಡೆಸಲಾಯಿತು. ನಂತರ ಮರು ತಿಂಗಳು ಜುಲೈಯಲ್ಲಿ ಬಿಜೆಪಿ ಅಕಾರಕ್ಕೆ ಬಂತು.

Share this Story:

Follow Webdunia kannada

ಮುಂದಿನ ಸುದ್ದಿ

ಬಿ ಡಿ ಎ ನಿವೇಶನ ಮಾರುವುದು ನಷ್ಟ