Select Your Language

Notifications

webdunia
webdunia
webdunia
webdunia

38 ಲಕ್ಷ ಪಂಗನಾಮ ಹಾಕಿದ ದೇವಮಾನವ!

38 ಲಕ್ಷ ಪಂಗನಾಮ ಹಾಕಿದ ದೇವಮಾನವ!
bangalore , ಬುಧವಾರ, 8 ಡಿಸೆಂಬರ್ 2021 (19:43 IST)
ಎಂಎಚ್‌ಬಿ ಕಾಲೋನಿಯ ಪೋಲೀಸ್ ಅವರು ಅಪರಿಚಿತ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ ಮತ್ತು ಅಪರಾಧಿಯನ್ನು ಹಿಡಿಯಲು ಕೆಲವು ಪುರಾವೆಗಳನ್ನು ಹುಡುಕಲು ವೆಬ್‌ಸೈಟ್ ಗಳನ್ನು ಪೂರ್ತಿಯಾಗಿ ಜಾಲಾಡುತ್ತಿದ್ದಾರೆನೀವು ಉದ್ಯೋಗಕ್ಕಾಗಿ (Job)ಅಲೆದಾಡುತ್ತಿರುವಾಗ ಅಥವಾ ಆನ್‌ಲೈನ್ ನಲ್ಲಿ ಅನೇಕ ವೆಬ್‌ಸೈಟ್ (Websites Online)ಗಳಲ್ಲಿ ನಿಮ್ಮ ರೆಸ್ಯೂಮೆ (Resume) ಹಾಕುತ್ತಿದ್ದಾಗ, ನಿಮಗೆ ಅನೇಕ ಕಡೆಗಳಿಂದ ಕರೆಗಳು ಬರುವುದುಂಟು. ನಾವು ಯಾವುದಾದರೊಂದು ಕೆಲಸ ಅಂತ ಸಿಕ್ಕರೆ ಸಾಕು ಅಂತ ಒಪ್ಪಿಕೊಳ್ಳುತ್ತೇವೆ. ಕೆಲವೊಮ್ಮೆ ಇಂತಹ ಕೆಲಸಗಳಿಗೆ ಒಪ್ಪಿ ತುಂಬಾ ದೊಡ್ಡ ಮಟ್ಟದ ಬೆಲೆಯನ್ನು(High price) ತೆರಬೇಕಾಗುತ್ತದೆ. ಈಗಂತೂ ಕೆಲಸ ಕೊಡಿಸುತ್ತೇವೆ ಎಂದು ಸುಳ್ಳು ಹೇಳಿ ನಂಬಿಸಿ ನಮ್ಮಿಂದ ಹಣವನ್ನು ಪಡೆದು ವಂಚನೆ ಮಾಡುವ ಜನರು ತುಂಬಾನೇ ಇದ್ದಾರೆ. ಈ ವಂಚಕರು,(fraudsters) ಉದ್ಯೋಗಕ್ಕಾಗಿ ಅಥವಾ ಅಂತಹುದೇ ಯಾವುದಾದರೂ ಕೆಲಸಕ್ಕಾಗಿ ಹತಾಶರಾಗಿರುವ ಜನರ ಪರಿಸ್ಥಿತಿಯ ಲಾಭವನ್ನು (Advantage)ಪಡೆದು ಅವರಿಂದ ಹಣವನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಮೋಸ ಮಾಡುತ್ತಾರೆ.
 
38 ಲಕ್ಷ ರೂಪಾಯಿ
ಇಲ್ಲಿಯೂ ಸಹ ಹೆಚ್ಚು ಕಡಿಮೆ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಸ್ವಲ್ಪ ವ್ಯತ್ಯಾಸವಿದೆ ಎಂದು ಹೇಳಬಹುದು. ಇಲ್ಲಿ ಕೆಲಸ ಕೊಡಿಸುವುದಾಗಿ ಅಂತ ಹೇಳದೇ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹವನ ಮಾಡುವ ಮೂಲಕ ಪರಿಹರಿಸಬಹುದು ಎಂದು ಸುಳ್ಳು ಹೇಳಿ ಮುಂಬೈನ 45 ವರ್ಷದ ಮಹಿಳೆಯ ಹತ್ತಿರ 38 ಲಕ್ಷ ರೂಪಾಯಿ ದೋಚಿದ್ದಾನೆ ಎಂದು ಆರೋಪಿಸಲಾಗಿದೆ.ಸುಮಾರು 10 ವರ್ಷಗಳಿಂದ ನಿರುದ್ಯೋಗಿಯಾಗಿದ್ದು, ದೀರ್ಘಕಾಲದಿಂದ ಉದ್ಯೋಗವನ್ನು ಹುಡುಕುತ್ತಿದ್ದಾಳೆ ಎಂದು ತಿಳಿದ ಒಬ್ಬ ವಂಚಕನು 'ದೇವ ಮಾನವ' ಎಂದು ಹೇಳಿಕೊಂಡು ಬಂದು ಈ ಮಹಿಳೆಯ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿ ಆನ್‌ಲೈನ್ ನಲ್ಲಿ ಅವಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ 'ಹವನ' ಮಾಡಿಸುವುದಾಗಿ ಆ ಮಹಿಳೆಗೆ ಹೇಳಿದನು.
 
ಆನ್‌ಲೈನ್ ಹವನ
ಇಷ್ಟು ದಿನ ಕೆಲಸ ಪಡೆಯಲು ಹತಾಶಳಾಗಿದ್ದ ಮಹಿಳೆ, 'ಆನ್‌ಲೈನ್ ಹವನ' ನಿಜವಾಗಿಯೂ ತನ್ನ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಭಾವಿಸಿ, ತನ್ನ ಎಲ್ಲಾ ಆಭರಣಗಳು ಮತ್ತು ಉಳಿತಾಯವನ್ನು ವಂಚಕನಿಗೆ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.ಮುಂಬೈನ ಬೊರಿವಲಿ ಪಶ್ಚಿಮ ಪ್ರದೇಶದಲ್ಲಿ ತನ್ನ ವೃದ್ಧ ಪೋಷಕರೊಂದಿಗೆ ವಾಸಿಸುವ ಮಹಿಳೆ ದೀರ್ಘಕಾಲದಿಂದ ನಿರುದ್ಯೋಗಿ ಆಗಿದ್ದಳು ಎಂದು ಎಂಎಚ್‌ಬಿ ಕಾಲೋನಿಯ ಪೊಲೀಸರು ತಿಳಿಸಿದ್ದಾರೆ. 2018 ರಲ್ಲಿ ಟಿವಿಯಲ್ಲಿ ಜಾಹೀರಾತು ಬಂದಾಗ ದೇವ ಮಾನವ ರೊಬ್ಬರು ಅವರಿಗಾಗಿ 'ಆನ್‌ಲೈನ್ ಹವನ' ನಡೆಸುವ ಮೂಲಕ ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದ್ದಾರೆ. ಜಾಹೀರಾತಿನಲ್ಲಿ ನೀಡಲಾದ ಆ ಸಂಖ್ಯೆಗೆ ಈ ಮಹಿಳೆ ಕರೆ ಮಾಡಿದ್ದಾಳೆ ಮತ್ತು ತನಗೆ ಸಹಾಯ ಮಾಡುವಂತೆ ಆ ವ್ಯಕ್ತಿಯನ್ನು ವಿನಂತಿಸಿ ಕೊಂಡಿದ್ದಾಳೆ.
 
ಶುಲ್ಕ ರೂಪದಲ್ಲಿ ಹಣ
ಇದಾದ ನಂತರ ಸುಮಾರು 4 ವರ್ಷಗಳ ಅವಧಿಯಲ್ಲಿ, ಅವಳು ಅವನಿಗೆ 38 ಲಕ್ಷ ರೂಪಾಯಿಯನ್ನು ನೀಡಿದ್ದಾಳೆ. ಆ ವ್ಯಕ್ತಿ ಮಹಿಳೆಗೆ ಸಹಾಯ ಮಾಡಲು 'ಹವನ' ಮಾಡುವುದಾಗಿ ಭರವಸೆ ನೀಡಿದ್ದು, ನಿರಂತರವಾಗಿ ಅವಳಿಂದ 'ಶುಲ್ಕ' ದ ರೂಪದಲ್ಲಿ ಹಣ ತೆಗೆದುಕೊಳ್ಳುತ್ತಲೇ ಇದ್ದನು ಎಂದು ಹೇಳಲಾಗಿದೆ. ಇಷ್ಟು ಸಮಯದ ನಂತರ ಏನೂ ಸಂಭವಿಸದಿದ್ದಾಗ, ಮಹಿಳೆ ನವೆಂಬರ್ 27 ರಂದು ಅಯೋಧ್ಯೆಗೆ ಪ್ರಯಾಣಿಸಿದಳು, ಅಂತಹ 'ಆನ್‌ಲೈನ್ ಹವನ' ನಡೆಸುವ ಅಂತಹ 'ದೇವ ಮಾನವ' ಅಂತಹ ಸ್ಥಳದಲ್ಲಿ ಯಾರೂ ಇಲ್ಲ ಎಂದು ಕಂಡುಕೊಂಡಳು. ಮುಂಬೈಗೆ ಮರಳಿದ ಆಕೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಪುರಾವೆ ಹುಡುಕಾಟ
ಎಂಎಚ್‌ಬಿ ಕಾಲೋನಿಯ ಪೋಲೀಸ್ ಅವರು ಅಪರಿಚಿತ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ ಮತ್ತು ಅಪರಾಧಿಯನ್ನು ಹಿಡಿಯಲು ಮಹಿಳೆಯರೇ ಹುಷಾರ್​! ಸೈಬರ್​ ವಂಚನೆ ಕೇಸ್​ನಲ್ಲಿ ಬೆಂಗಳೂರಿಗೆ ನಂ.1 ಸ್ಥಾನಕೆಲವು ಪುರಾವೆಗಳನ್ನು ಹುಡುಕಲು ವೆಬ್‌ಸೈಟ್ ಗಳನ್ನು ಪೂರ್ತಿಯಾಗಿ ಜಾಲಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇಂತಹ ವಂಚನೆಗಳು ತುಂಬಾನೇ ನಡೆದಿದ್ದು, ಜನರಿಗೆ ಇದರ ಬಗ್ಗೆ ಎಷ್ಟೇ ಅರಿವು ನೀಡಿದರೂ ಸಹ ವಂಚಕರ ಬಲೆಗೆ ಬೀಳುತ್ತಿರುವುದು ತುಂಬಾನೇ ಬೇಸರದ ಸಂಗತಿಯಾಗಿದೆ. ಇತ್ತೀಚೆಗೆ ಮುಂಬೈನ ಬೊರಿವಲಿ ಪ್ರದೇಶದ ಗೃಹಿಣಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತೇವೆ ಎಂದು ಹೇಳಿ ವ್ಯಕ್ತಿಯೊಬ್ಬ 2.33 ಲಕ್ಷ ರೂಪಾಯಿಗಳನ್ನು ದೋಚಿದ್ದಾನೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ನಾಯಿಗೆ ಸೀಮಂತ, ಬಳೆ ಶಾಸ್ತ್ರ ಮಾಡಿದ ಪೊಲೀಸ್: ಹೀಗೊಬ್ಬ ಶ್ವಾನಪ್ರೇಮಿ