ಒಂದು ಕಾಲದಲ್ಲಿ ಗುರು- ಶಿಷ್ಯರಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಎಂಟಿಬಿ ನಾಗರಾಜ್ ರಾಜಕಾರಣದ ಚದುರಂಗ ಆಟದಿಂದ ದೂರವಾಗಿದ್ದು, ಎರಡು ವರ್ಷಗಳ ಬಳಿಕ ಒಂದಾಗಿದ್ದಾರೆ.
ಹೀಗೆ ಒಂದೇ ಟೇಬಲ್ ನಲ್ಲಿ ಅಕ್ಕಪಕ್ಕ ಕುಳಿತ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಎಂಟಿಬಿ ನಾಗರಾಜ್ ನಾಟಿ ಕೋಳಿ ಸಾರಿನ ರುಚಿ ಸವೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ. ಇಂದು ಹೊಸಕೋಟೆ ಪಟ್ಟಣದ ಕನಕ ನಗರದಲ್ಲಿ ಕನಕ ಸಮೃದ್ದ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನ ಕಾರ್ಯಕ್ರಮಕ್ಕು ಮುನ್ನ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಇಬ್ಬರು ಒಟ್ಟಾಗಿ ಕುಳಿತು ರಾಗಿ ಮುದ್ದೆ, ನಾಟಿ ಕೋಳಿ ಸಾರಿನ ಊಟ ಮಾಡಿದರು.
ಕಳೆದ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಎಂಟಿಬಿ ನಾಗರಾಜ್ ಬಿಜೆಪಿ ಪಕ್ಷ ಸೇರಿದ ಮೇಲೆ 2019 ರ ಉಪ ಚುನಾವಣೆ ರಾಜಕೀಯ ವೇದಿಕೆಗಳಲ್ಲಿ ಎಂಟಿಬಿ ನಾಗರಾಜ್ ತೀವ್ರವಾಗಿ ವಾಗ್ದಾಳಿ ನಡೆಸಿದ್ರು, ಅದಾದ ಬಳಿಕ ಇಂದು ಹೊಸಕೋಟೆಯಲ್ಲಿ ಕನಕ ಸಮೃದ್ದಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನ ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸಿ ಇಬ್ಬರು ತಮ್ಮ ಪಾಡಿಗೆ ತಾವು ವಾಪಸ್ಸಾಗಿದ್ದಾರೆ.
ಒಟ್ಟಾರೆ ಸೊಸೈಟಿ ಉದ್ಘಾಟನ ಕಾರ್ಯಕ್ರಮದಲ್ಲಿ ಗುರು ಶಿಷ್ಯರಾದ ಸಿದ್ದು ಹಾಗೂ ಎಂಟಿಬಿ ಸುಮ್ಮನಿದ್ದರು ಅವರ ಬೆಂಬಲಿಗರು ಮಾತ್ರ ತಮ್ಮ ನಾಯಕರುಗಳ ಬಗ್ಗೆ ಘೋಷಣೆಗಳನ್ನು ಕೂಗಿದ್ದು ಮಾತ್ರ ಕೀಳು ಮಟ್ಟದ ರಾಜಕೀಯ ತೋರುವಂತಿತ್ತು.