Select Your Language

Notifications

webdunia
webdunia
webdunia
webdunia

ಯುವತಿಯ ಖಾಸಗಿ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿದ ದುಷ್ಕರ್ಮಿಗಳು

ಯುವತಿಯ ಖಾಸಗಿ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿದ ದುಷ್ಕರ್ಮಿಗಳು
bangalore , ಶುಕ್ರವಾರ, 13 ಆಗಸ್ಟ್ 2021 (21:19 IST)
ಯುವತಿಯೊಂದಿಗೆ ಕಳೆದ ಖಾಸಗಿ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದ ನಾಲ್ವರು ಬಾಲಕರಿಂದ  ಬ್ಲ್ಯಾಕ್‍ಮೇಲ್‍ಗೊಳಗಾದ ಚೆಸ್ಕಾಂ ಕ್ಲರ್ಕ್ ಡೆತ್‍ನೋಟ್ ಬರೆದು ಉಪ್ಪಾರ್‍ಪೇಟೆಯ ಲಾಡ್ಜ್‍ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.  
ಹಾಸನ ಜಿಲ್ಲೆಯ ಅರಸೀಕೆರೆಯ ನಿವಾಸಿ ಸುಪ್ರೀತ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಬ್ಲ್ಯಾಕ್‍ಮೇಲ್ ಮಾಡಿದ ನಾಲ್ವರು ಬಾಲಕರನ್ನು ಉಪ್ಪಾರ್‍ಪೇಟೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಚೆಸ್ಕಾಂನಲ್ಲಿ ಕ್ಲರ್ಕ್ ಆಗಿದ್ದ ಸುಪ್ರೀತ್ ಕೆಲ ವರ್ಷಗಳಿಂದ ತಮ್ಮದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. 3 ತಿಂಗಳ ಹಿಂದೆ ಪ್ರಿಯತಮೆಯನ್ನು ಅರಸಿಕೆರೆಯ ಬೆಟ್ಟವೊಂದಕ್ಕೆ ಕರೆದೊಯ್ದು ಸರಸ ಸಲ್ಲಾಪದಲ್ಲಿ ತೊಡಗಿದ್ದ. ಈ ಬೆಟ್ಟದ ಸಮೀಪದಲ್ಲಿ ವಾಸಿಸುತ್ತಿದ್ದ ನಾಲ್ವರು ಬಾಲಕರು ಇದನ್ನು ಗಮನಿಸಿ ತಮ್ಮ ಮೊಬೈಲ್‍ನಲ್ಲಿ ಸುಪ್ರೀತ್ ಹಾಗೂ ಯುವತಿಯ ನಡುವಿನ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ನಂತರ ಸುಪ್ರೀತ್‍ಗೆ ಈ ದೃಶ್ಯ ತೋರಿಸಿ 3 ಸಾವಿರ ರೂ. ಹಾಗೂ ಆತನ ಮೊಬೈಲ್ ನಂಬರ್ ಪಡೆದಿದ್ದರು. ಕೆಲ ದಿನಗಳ ಬಳಿಕ ಸುಪ್ರೀತ್ ವಾಟ್ಸ್‍ಆ್ಯಪ್‍ಗೆ ಖಾಸಗಿ ದಶ್ಯ ಕಳುಹಿಸಿದ ಬಾಲಕರು, ಹಣ ಕೊಡದಿದ್ದರೆ ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದರು. ಆತಂಕಗೊಂಡ ಸುಪ್ರೀತ್ ಆರೋಪಿಗಳಿಗೆ ಆಗಾಗ 3 ರಿಂದ 5 ಸಾವಿರ ರೂ. ವರೆಗೆ ಕೊಡುತ್ತಿದ್ದ. ಇತ್ತೀಚೆಗೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟ ಬಾಲಕರು, ಪ್ರಿಯತಮೆಯ ನಂಬರ್ ಕೊಡುವಂತೆ ಪೀಡಿಸುತ್ತಿದ್ದರು.
 
ವಿಷ ಸೇವಿಸಿ ಆತ್ಮಹತ್ಯೆ:
ಬಾಲಕರ ಹಿಂಸೆ ತಾಳಲಾರದೇ ನೊಂದ ಸುಪ್ರೀತ್ ಗುರುವಾರ ಬೆಳಗ್ಗೆ ಅರಸೀಕೆರೆಯಿಂದ ಬೆಂಗಳೂರಿಗೆ ಬಂದು ಉಪ್ಪಾರ್‍ಪೇಟೆಯ ಲಾಡ್ಜ್‍ವೊಂದರಲ್ಲಿ ರೂಂ ಪಡೆದಿದ್ದ. ಮಧ್ಯಾಹ್ನ ಊಟ ಮಾಡಿ ಡೆತ್‍ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ವಿಷ ಸೇವಿಸಿದ ಬಳಿಕ ರೂಂನ ಸ್ನಾನದ ಕೋಣೆಗೆ ಹೋಗಿ ನಲ್ಲಿ ಆನ್ ಮಾಡಿದ್ದ. ಸುಪ್ರೀತ್ ತಂಗಿದ್ದ ರೂಂನಿಂದ ನೀರು ಲಾಡ್ಜ್‍ನ ಹೊರಗೆ ಹರಿದು ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದರು. ಅನುಮಾನಗೊಂಡು ಬಾಗಿಲು ಒಡೆದು ರೂಂನೊಳಗೆ ಹೋಗಿ ನೋಡಿದಾಗ ಸುಪ್ರೀತ್ ಮೃತದೇಹ ಕಂಡು ಬಂದಿತ್ತು. ಕೂಡಲೇ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಉಪ್ಪಾರಪೇಟೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾಗ ಡೆತ್‍ನೋಟ್ ಪತ್ತೆಯಾಗಿತ್ತು. ಇದರಲ್ಲಿದ್ದ ಮಾಹಿತಿ ಆಧರಿಸಿ ಅರಸೀಕೆರೆಗೆ ತೆರಳಿದ ಪೆÇಲೀಸರು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಬಾಲಕರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮರ್ಶಿಯಲ್ ಸ್ಟ್ರೀಟ್ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ