Select Your Language

Notifications

webdunia
webdunia
webdunia
webdunia

ವೃದ್ದಾಶ್ರಮದಲ್ಲಿ ಮಾಜಿ ಜಿಪಂ ಅಧ್ಯಕ್ಷೆ ಪಂಚಮಿ ಆಚರಣೆ

ವೃದ್ದಾಶ್ರಮದಲ್ಲಿ ಮಾಜಿ ಜಿಪಂ ಅಧ್ಯಕ್ಷೆ ಪಂಚಮಿ ಆಚರಣೆ
bangalore , ಶುಕ್ರವಾರ, 13 ಆಗಸ್ಟ್ 2021 (20:54 IST)
ಕಣ್ಣೀರುಹಾಕಬೇಡಿರಿ,ನಗು ನಗುನಗುತ್ತಾ ಇರಿ.ಇವತ್ತು ನಾಗರ ಪಂಚಮಿ ಹಾಲು ಕುಡಿದು ಸಂತೋಷ ದಿಂದ ಇರಿ ಎಂದು ವಯೋವೃದ್ದ ಅಜ್ಜಿಂದಿಯಂದಿರಿಗೆ ಸಮಾಧಾನ ಮಾಡಿದ ಪರಿ ಇದು.ಹೀಗೆ ಸಮಾಧಾನ ಪಡಿಸುತ್ತಿರುವವರು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ ನಾಗರ ಪಂಚಮಿ ಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸುವ ಮೂಲಕ ಗಮನ ಸೆಳೆದರು.ಬಾಗಲಕೋಟೆ ನಗರದ ಸಮೀಪ ಇರುವ ಸರ್ವೋದಯ ವೃದ್ದಾಶ್ರಮದಲ್ಲಿ ಹಿರಿಯ ಜೀವಿಗಳು,ಅನಾಥರು ಇದ್ದು,ಅವರಿಗೆ ಹಾಲು ಕೂಡುವ ಮೂಲಕ ವೀಣಾ ಕಾಶಪ್ಪನವರ ನಾಗರ ಪಂಚಮಿಯನ್ನು ವಿಶೇಷ ವಾಗಿ ಆಚರಣೆ ಮಾಡಿದರು.ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ದಿಂದ ವೃದ್ದಾಶ್ರಮಕ್ಕೆ ತೆರಳಿದ ಸಮಯದಲ್ಲಿ, ಅಜ್ಜಿಯೊಬ್ಬರು ಹಾಲು ಕುಡಿಸಿದ ವೀಣಾ ಕಾಶಪ್ಪನವರ ಮಮತೆ ನೋಡಿ ಕಣ್ಣೀರು ಹಾಕಿ,ತಮ್ಮ ಮಕ್ಕಳ ಬಗ್ಗೆ ನೆನೆಪು ಮಾಡಿಕೊಂಡು ದುಃಖ ಪಟ್ಟರು.ಇಂತಹ ಸಮಯದಲ್ಲಿ ಅಳಬಾರದು,ನೀವು ನಗುನಗುತ್ತಾ ಇರಿ,ಎಂದು ಹೇಳುವ ಮೂಲಕ ತಾಯಿಗೆ ಮಗಳ ವಾತ್ಸಲ್ಯ ಮೂಡಿಸಿದರು.ಅಲ್ಲದೆ ಹಿರಿಯ ಜೀವಿಗಳ ಸಮಸ್ಯೆ ಆಲಿಸಿ,ನೀವು ನಗುನಗುತ್ತಾ ಇರಿ ಎಂದು ಹಾರೈಸಿದರು.ಇದೇ ಸಮಯ ಹಿರಿಯ ಅಜ್ಜಿಂದಿಯರು,ಅನಾಥ ಇರುವ ಮಕ್ಕಳ,ಬುದ್ದಿ ಮಾಂದ್ಯ ಮಕ್ಕಳಿಗೆ ಹಾಕು ಕುಡಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟಗಳ ಧೈರ್ಯವಾಗಿ ಎದುರಿಸಿ ಎಂದು ಧೈರ್ಯ ತುಂಬಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಪಾರ್ಟ್‍ಮೆಂಟ್‍ನಲ್ಲಿ ಮನೆ ಕೆಲಸಕ್ಕೆಂದು ಸೇರಿಕೊಂಡು ಅದೇ ಮನೆಗಳಲ್ಲಿ ಚಿನ್ನಾಭರಣ ಕಳವು