Select Your Language

Notifications

webdunia
webdunia
webdunia
webdunia

ವಾಹನ ಸಂಚಾರದ ವೇಳೆ ತಪಾಸಣೆ

ವಾಹನ ಸಂಚಾರದ ವೇಳೆ ತಪಾಸಣೆ
bangalore , ಶುಕ್ರವಾರ, 13 ಆಗಸ್ಟ್ 2021 (20:40 IST)
ವಾಹನ ಸಂಚಾರದ ವೇಳೆ ತಪಾಸಣೆ ನಡೆಸುವ ಶೇ. 50 ರಷ್ಟು ಸಂಚಾರ ಪೆÇಲೀಸರಿಗೆ ಶೀಘ್ರದಲ್ಲೇ ಬಾಡಿ ಒನ್ ಕ್ಯಾಮರಾ ಕೊಡಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ. 
ಪೆÇಲೀಸರ ಭ್ರಷ್ಟಾಚಾರ ತಡೆಗೆ ತಪಾಸಣೆ ನಡೆಸುವವರಿಗೆ ಬಾಡಿ ಓನ್? ಕ್ಯಾಮರಾ ನೀಡಬೇಕು ಎಂದು ಹಿಂದಿನಿಂದಲೂ ಸಾರ್ವಜನಿಕರು ಒತ್ತಾಯಿಸುತ್ತ ಬಂದಿದ್ದರು. ಇದರ ಭಾಗವಾಗಿ ಕೆಲವರಿಗೆ ಬಾಡಿ ಓನ್ ಕ್ಯಾಮರಾ ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ನೀಡಲಾಗಿರಲಿಲ್ಲ. ಇದೀಗ ಶೇ. 50ರಷ್ಟು ಟ್ರಾಫಿಕ್ ಪೆÇಲೀಸರಿಗೆ ಕ್ಯಾಮರಾ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. 
ಬೆಂಗಳೂರು ಸಂಚಾರ ಪೆÇಲೀಸರ ಅಧಿಕೃತ ಫೇಸ್?ಬುಕ್ ಖಾತೆಯಲ್ಲಿ ಲೈವ್ ಬಂದ ಅವರು ಸಾರ್ವಜನಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ವಿಷಯ ತಿಳಿಸಿದರು. ಮತ್ತಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪೆÇಲೀಸರು ಸಾರ್ವಜನಿಕರ ಜತೆ ಕಟುವಾಗಿ ವರ್ತಿಸಬಾರದು. ಕಾನೂನು ಉಲ್ಲಂಘಿಸಿದವರೊಂದಿಗೆ ಸೌಜನ್ಯದಿಂದಲೇ ವರ್ತಿಸಿ ದಂಡ ವಿಧಿಸಬೇಕು. ಒಂದುವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಸೌಜನ್ಯದಿಂದ ವರ್ತಿಸುವ ಕುರಿತು ಪೆÇಲೀಸರಿಗೆ ಅದರಲ್ಲೂ ಹೊಸದಾಗಿ ನೇಮಕಗೊಂಡವರಿಗೆ ಸಾಫ್ಟ್ ? ಸ್ಕಿಲ್ಸï? ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪೆÇಲೀಸರು ಸುಖಾಸುಮ್ಮನೆ ತಡೆದು ಪರಿಶೀಲಿಸುತ್ತಾರೆ ಎಂದು ಸಾರ್ವಜನಿಕರೊಬ್ಬರು ದೂರಿದ್ದಕ್ಕೆ, ಸಾಮಾನ್ಯವಾಗಿ ಪೆÇಲೀಸರು ಎರಡು ರೀತಿಯ ತಪಾಸಣೆ ಮಾಡುತ್ತಾರೆ ಎಂದ ಅವರು, ಕಣ್ಣಿಗೆ ಕಾಣಿಸುವಂಥ ಸಂಚಾರ ನಿಯಮ ಉಲ್ಲಂಘನೆ ಇರದಿದ್ದರೆ ತಡೆಯಬಾರದು. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಹಾಗೂ ಹಳೆಯ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ತಡೆದು ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

75ನೇ ವರ್ಷದ ಸ್ವಾಂತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ನಗರದ ಮಾಣಿಕ್ ಷಾ ಮೈದಾನ ಸಜ್ಜು