Select Your Language

Notifications

webdunia
webdunia
webdunia
webdunia

ಕರ್ನಾಟಕ ಬಿಟ್ ಕಾಯಿನ್ ಹಗರಣ; ಅಮೆರಿಕದ ಎಫ್ ಬಿಐ ತನಿಖೆ?

FBI India Karnataka Bitcoin ಬಿಟ್ ಕಾಯಿನ್ ಎಫ್ ಬಿಐ ಕರ್ನಾಟಕ
bengaluru , ಭಾನುವಾರ, 10 ಏಪ್ರಿಲ್ 2022 (15:14 IST)

ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ ಬಿಟ್ ಕಾಯಿನ್ ಹಗರಣ ಕುರಿತು ತನಿಖೆ ಮಾಡಲು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ಭಾರತಕ್ಕೆ ಬಂದಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇಶಾದ್ಯಂತ ಭಾರೀ ಸುದ್ದಿ ಮಾಡಿದ ಬಿಟ್ ಕಾಯಿನ್ ಹಗರಣ ಕುರಿತು ಭಾರತದ ತನಿಖಾ ಸಂಸ್ಥೆಗಳು ತನಿಖೆ ಮಾಡದೇ ಮೌನ ವಹಿಸಿದ ಹಿನ್ನೆಲೆಯಲ್ಲಿ ಎಫ್ ಬಿಐ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ಎಫ್ ಬಿಐ ಬಿಟ್ ಕಾಯಿನ್ ಹಗರಣ ಕುರಿತು ಭಾರತಕ್ಕೆ ಬಂದಿದೆ ಎಂದು ನೀಡಿರುವ ಹೇಳಿಕೆಯನ್ನು ಸಿಬಿಐ ನಿರಾಕರಿಸಿದ್ದು, ಅಮೆರಿಕದ ಯಾವುದೇ ಏಜೆನ್ಸಿ ಭಾರತಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಂಡಮಾನ್-ನಿಕೋಬಾರ್ ನಲ್ಲಿ ಲಘು ಭೂಕಂಪನ!