Select Your Language

Notifications

webdunia
webdunia
webdunia
webdunia

ಒಮೈಕ್ರಾನ್ ಭೀತಿ: ಸದ್ಯಕ್ಕೆ ವೀಕೆಂಡ್, ನೈಟ್ ಕರ್ಫ್ಯೂ ಇಲ್ಲ: ಸಿಎಂ ಬೊಮ್ಮಾಯಿ

webdunia
bangalore , ಗುರುವಾರ, 9 ಡಿಸೆಂಬರ್ 2021 (20:09 IST)
ಬೆಂಗಳೂರು: ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅಥವಾ ವಿಶೇಷವಾದ ನಿರ್ಬಂಧ ವಿಧಿಸುವ ಬಗ್ಗೆ ನಿರ್ಧರಿಸಿಲ್ಲ. ಇನ್ನೊಂದು ವಾರದ ಬೆಳವಣಿಗೆ ಅವಲೋಕಿಸಿ ಕ್ರಿಸ್ ಮಸ್ , ಹೊಸ ವರ್ಷಾಚರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಹಾಸ್ಟೆಲ್‌ಗಳಿಗೆ ಹೊಸ ಮಾರ್ಗಸೂಚಿ
ಹಾಸ್ಟೆಲ್‌ನಲ್ಲಿ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ, ಸುರಕ್ಷಿತ ಅಂತರ ಕಾಪಾಡಿಕೊಂಡು ಊಟ ಮಾಡುವುದಕ್ಕೆ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ, ಹಾಸ್ಟೆಲ್ ಸಿಬ್ಬಂದಿಗೆ 2 ಡೋಸ್ ಕೊವಿಡ್ ಲಸಿಕೆ ಕಡ್ಡಾಯ, ಹಾಸ್ಟೆಲ್‌ಗಳಿಗೆ ಹೊಸಬರಿಗೆ ಕಡ್ಡಾಯವಾಗಿ ಪ್ರವೇಶ ಇರುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳನ್ನ ಮುಚ್ಚುವಂತ ಪರಿಸ್ಥಿತಿ ಸದ್ಯಕ್ಕೆ ಇಲ್ಲ: ಸಚಿವ ಬಿ.ಸಿ ನಾಗೇಶ್