ನಿನ್ನೆ ದೇಶದಲ್ಲಿ 17 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ರಾಜಸ್ಥಾನದಲ್ಲಿ 9, ಮಹಾರಾಷ್ಟ್ರದಲ್ಲಿ 7 ಮತ್ತು ದೆಹಲಿಯಲ್ಲಿ ತಾಂಜಾನಿಯಾದಿಂದ ಬಂದ ಪ್ರಜೆಗೆ ಸೋಂಕು ಇರುವುದು ದೃಢಪಟ್ಟಿದೆ.
ರಾಜಸ್ಥಾನದಲ್ಲಿ ಏಳು ಪ್ರಕರಣಗಳು ಕಾಣಿಸಿದ್ದು, ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಿಂದ ಬಂದಿದ್ದರು ಎನ್ನುವ ಮಾಹಿತಿ ದೊರಕಿದೆ.
ಭಾರತದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿತ್ತು. ಇದುವರೆಗೂ ರಾಜ್ಯದಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತಿದ್ದು, ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್ ಪರೀಕ್ಷೆನಡೆಯುತ್ತಿದೆ.