ಜಗತ್ತಿನಿಂದ ಕೊರೋನಾ ಮಹಾಮಾರಿಯನ್ನು ಸಂಪೂರ್ಣವಾಗಿ, ಇನ್ನೆಂದೂ ಬಾರದಂತೆ ಓಡಿಸೋದಕ್ಕೆ ವಿಜ್ಞಾನಿಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಈಗಾಗಲೇ ಅನೇಕ ಲಸಿಕೆ ಕಂಡುಹಿಡಿದು ಆಗಿದ್ದರೂ, ಕೊರೋನಾ ಸೋಂಕು ಇನ್ಯಾವುದೋ ರೂಪ ಧರಿಸಿ ತೊಂದರೆ ನೀಡುವುದಕ್ಕೆ ತಯಾರಾಗುತ್ತಲೇ ಇದೆ.
ಈ ಸಮಸ್ಯೆಗೆ ಪರಿಹಾರ ಚೂಯಿಂಗ್ ಗಮ್‌ನಲ್ಲಿ ಅಡಗಿದೆ.
ಹೌದು, ಸಸ್ಯಜನ್ಯ ಲೇಪಿತ ಚೂಯಿಂಗ್ ಗಮ್ ಅಗಿಯುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು ಎಂದು ಅಧ್ಯಯನವೊಂದು ಹೇಳುತ್ತಿದೆ.
ಪೆನ್ಸಿಲ್‌ವೇನಿಯಾ ವಿಶ್ವವಿದ್ಯಾಲಯ ಸಂಶೋಧಕ ಹೆನ್ರಿ ಡೇನಿಯಲ್ ತಂಡ ಈ ಅಧ್ಯಯನ ನಡೆಸಿದ್ದು, ಮಾಲಿಕ್ಯುಲರ್ ಥೆರಪಿ ಎನ್ನುವ ಮ್ಯಾಗಜೀನ್‌ನಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. ಕೊರೋನಾ ವೈರಸ್ ಬಾಯಿಯ ಲಾವಾರಸದಲ್ಲಿ ಅಡಗಿರುತ್ತದೆ. ಇದು ಕೆಮ್ಮಿದಾಗ,ಸೀನಿದಾಗ ವೇಗವಾಗಿ ಬಾಯಿಯಿಂದ ಹೊರ ಹೋಗುತ್ತದೆ. ಆದರೆ ಈ ಸಸ್ಯಜನ್ಯ ಪ್ರೋಟೀನ್ ಲೇಪಿತ ಚೂಯಿಂಗ್ ಗಮ್ ಅಗಿಯುವುದರಿಂದ ವೈರಸ್ ಬಾಯಿಯಲ್ಲಿಯೇ ಸಾಯುತ್ತವೆ. ವೈರಸ್ ಚೂಯಿಂಗ್ ಗಮ್‌ನಲ್ಲಿ ಬಂಧಿಯಾಗುತ್ತವೆ. ಇದೊಂದು ರೀತಿ ಟ್ರಾಪ್ ಆಗಿದೆ ಎಂದು ಹೆನ್ರಿ ಡೇನಿಯಲ್ ಹೇಳಿದ್ದಾರೆ.
ಕೋವಿಡ್ ಸೋಂಕು ಇರುವ ರೋಗಿಗಳಿಗೆ ಪ್ರಯೋಗಾರ್ಥವಾಗಿ ಚೂಯಿಂಗ್ ಗಮ್ ನೀಡಿದ್ದು, ಅವರ ಲಾವಾರಸದಲ್ಲಿನ ಕೊರೋನಾ ವೈರಸ್ ಪ್ರಮಾಣ ಭಾರೀ ಇಳಿಕೆಯಾಗಿದೆ. ಇದನ್ನು ಕ್ಲಿನಕಲ್ ಟ್ರಯಲ್‌ಗೆ ನೀಡಬೇಕಾಗಿದೆ ಎಂದು ಹೆನ್ರಿ ಹೇಳಿದ್ದಾರೆ.