Select Your Language

Notifications

webdunia
webdunia
webdunia
webdunia

ಓಲಾ, ಊಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ : ಶಿವಕುಮಾರ್

ಓಲಾ, ಊಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ : ಶಿವಕುಮಾರ್
ಬೆಂಗಳೂರು , ಮಂಗಳವಾರ, 12 ಸೆಪ್ಟಂಬರ್ 2023 (07:17 IST)
ಬೆಂಗಳೂರು : ಖಾಸಗಿ ಬಸ್ ಮಾಲೀಕರಿಗೆ ಶಕ್ತಿ ಯೋಜನೆಯಿಂದ ತೊಂದರೆ ಆಗಿರುವುದು ನಿಜ. ಆದರೆ ಓಲಾ, ಊಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ ಇರಬಹುದು ಎಂದು ಉಪಮುಖ್ಯಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
 
ಸದಾಶಿವ ನಗರದ ನಿವಾಸದ ಬಳಿ ಮಾತನಾಡಿದ ಅವರು, ಖಾಸಗಿ ಬಸ್ ಮಾಲೀಕರಿಗೆ ಆಗಿರುವ ತೊಂದರೆಯನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಆಟೋ ಚಾಲಕರು ತೊಂದರೆ ಅನುಭವಿಸುತ್ತಿದ್ದರೂ ಅದನ್ನು ಬಗಹರಿಸುತ್ತೇವೆ. ನಮಗೂ ಅದರ ಬಗ್ಗೆ ಅರಿವಿದೆ ಎಂದರು.

ಸರ್ಕಾರವನ್ನು ಹೆದರಿಸುವುದು, ಪ್ರಯಾಣಿಕರಿಗೆ ತೊಂದರೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರ ಖಂಡಿತವಾಗಿ ಅವರ ಎಲ್ಲಾ ಸಮಸ್ಯೆಗಳನ್ನು ಕೇಳುತ್ತದೆ ಮತ್ತು ಸೂಕ್ತ ಪರಿಹಾರ ಒದಗಿಸುತ್ತದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಒಳ್ಳೆಯದಾಗಿದೆಯಲ್ಲ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಹಿತಕ್ಕೆ ನಿಮ್ಮ ಬಳಿ ಹಣವಿಲ್ವಾ?