Publish Date: Mon, 11 Sep 2023 (13:09 IST)
Updated Date: Mon, 11 Sep 2023 (14:07 IST)
ಬೆಂಗಳೂರು : ಖಾಸಗಿ ವಾಹನದವರು ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಖಾಸಗಿ ಬಸ್ಸಿನವರಿಗೆ ಸ್ವಲ್ಪ ತೊಂದರೆಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಊಬರ್ ಆಟೋ ಪ್ರತಿಭಟನೆ ಬಹುಶಃ ಅದು ರಾಜಕೀಯ ಪ್ರೇರಣೆ ಎಂದು ಹೇಳಿದರು.
ನಾವು ಅವರ ಬಗ್ಗೆ ಬಹಳ ಕರುಣೆಯಿಂದ ಇದ್ದೇವೆ. ಹೆದರಿಸುವುದು, ಪ್ರಯಾಣಿಕರಿಗೆ ತೊಂದರೆ ಮಾಡುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸುತ್ತದೆ.