ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರಕಾರ ಮುಂದಾಗಿದೆ.
ಈ ಮೊದಲು ಗ್ರೀನ್ ಝೋನ್ ನಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಹೇಳಲಾಗುತ್ತಿದ್ದರಾದರೂ ಅದರಿಂದ ಸರಕಾರಕ್ಕೆ ಕೆಟ್ಟಹೆಸರು ಬರಬಹುದೆಂಬ ಲೆಕ್ಕಾಚಾರದಲ್ಲಿದ್ದರು.
ಇದೀಗ ಮೂರನೇ ಸಲ ಲಾಕ್ ಡೌನ್ ವಿಸ್ತರಣೆಗೆ ಸರಕಾರ ಮುಂದಾಗಿರುವ ಬೆನ್ನಲ್ಲೆ ಕುಡುಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಎಣ್ಣೆಯನ್ನು ಮದ್ಯದ ಅಂಗಡಿಯಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಕಂಟೈನ್ ಮೆಂಟ್ ಝೋನ್ ನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಮುಂದುವರಿದಿದೆ.