Select Your Language

Notifications

webdunia
webdunia
webdunia
webdunia

ಕೊಪ್ಪಳದಲ್ಲಿ ಲಾಕ್ ಡೌನ್ ಸಡಿಲಿಕೆಗೆ ಭಾರೀ ವಿರೋಧ

ಕೊಪ್ಪಳದಲ್ಲಿ ಲಾಕ್ ಡೌನ್ ಸಡಿಲಿಕೆಗೆ ಭಾರೀ ವಿರೋಧ
ಕೊಪ್ಪಳ , ಬುಧವಾರ, 29 ಏಪ್ರಿಲ್ 2020 (12:07 IST)
ಕೊಪ್ಪಳ: ಗ್ರೀನ್ ಝೋನ್ ನಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.


ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆಡಳಿತ ಅಧಿಕಾರಿ ಈಶ್ವರ ಸವಡಿ ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಕೊರೊನಾ ಹೆಚ್ಚಾಗುತ್ತದೆ. ಜಿಲ್ಲೆಯಲ್ಲಿ 397 ಜನರಿಗೆ ಕೊರೊನಾ ಪಾಸಿಟಿವ್ ಬರುತ್ತದೆ ಎಂದು ಕಿಡಿಕಾರಿದ್ದಾರೆ.


ಮಂಗಳೂರು, ಉಡುಪಿಯಿಂದ ಕಾರ್ಮಿಕರು ಬಂದಿದ್ದಾರೆ. ಅವರಲ್ಲಿ ಯಾರಿಗೆ ಕೊರೊನಾ ಇದೆಯೋ ಯಾರಿಗೆ ಗೊತ್ತು. ಕೊರೊನಾ ಸೋಂಕು ಬೇಗ ಕಂಟ್ರೋಲ್ ಗೆ ಬರುವುದಿಲ್ಲ. ಸುಮಾರು 8 ತಿಂಗಳ ಕಾಲ ಈ ಸೋಂಕು ಇರುತ್ತದೆ. ಗ್ರೀನ್ ಝೋನ್ ಅಂದ್ರೆ ಕೊರೊನಾ ಇಲ್ಲವೆಂದು ಅಲ್ಲ  ಎಂದು ಅವರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧ ಕರ್ನಾಟಕಕ್ಕೆ ಲಾಕ್ ಡೌನ್ ನಿಂದ ರಿಲಿಫ್; ಯಾವುದಕ್ಕೆಲ್ಲಾ ರಿಲೀಫ್?